ADVERTISEMENT

ಬೀದರ್ | ಮೂರು ದಿನ ಭಾರಿ ಮಳೆ ; ರೆಡ್ ಅಲರ್ಟ್ ಘೋಷಣೆ

ಬೀದರ್ ಜಿಲ್ಲೆಯಾದ್ಯಂತ ಸತತ ಮಳೆ; ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 5:07 IST
Last Updated 25 ಜುಲೈ 2023, 5:07 IST
ಜಿಲ್ಲೆಯಾದ್ಯಂತ ಮುಂದುವರೆದ ಮಳೆ
ಜಿಲ್ಲೆಯಾದ್ಯಂತ ಮುಂದುವರೆದ ಮಳೆ   

ಬೀದರ್: ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬಸವಕಲ್ಯಾಣ ತಾಲ್ಲೂಕಿನ ಧನ್ನೂರ (ಆರ್) ಗ್ರಾಮದ ಹಳ್ಳದಲ್ಲಿ ಯುವಕನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ.

ಮಲ್ಲಪ್ಪ ಶರಣಪ್ಪ ಕತೆಪನೋರ್ (25) ಮೃತ ಯುವಕ. ಸೋನವಾರ ರಾತ್ರಿ ಹಳ್ಳದಿಂದ ನಡೆದುಕೊಂಡು ಹೋಗುವಾಗ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.

ಸೋಮವಾರ ರಾತ್ರಿ ಎಂಟು ಗಂಟೆಗೆ ಆರಂಭಗೊಂಡ ಜಿಟಿಜಿಟಿ ಮಳೆ ರಾತ್ರಿಯಿಡಿ ಸುರಿದಿದೆ. ಮಂಗಳವಾರವೂ ಮುಂದುವರೆದಿದೆ.

ADVERTISEMENT

ಬೆಳಿಗ್ಗೆ ಶಾಲಾ, ಕಾಲೇಜು ಹಾಗೂ ದೈನಂದಿನ ಕೆಲಸಗಳಿಗೆ ಹೋಗುವವರು ಪರದಾಟ ನಡೆಸಬೇಕಾಯಿತು. ಜಿಲ್ಲೆಯಾದ್ಯಂತ 35.36 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ನಿರ್ಣಾ ಹೋಬಳಿಯಲ್ಲಿ ಅತಿ ಹೆಚ್ಚು 88 ಮಿ.ಮೀ ಮಳೆ ದಾಖಲಾಗಿದೆ.

ರೆಡ್ ಅಲರ್ಟ್:

ಮುಂದಿನ ಮೂರು ದಿನ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜುಲೈ 27ರಂದು 100 ಮಿ.ಮೀ.ಗೂ ಹೆಚ್ಚು ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಜನ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.