ADVERTISEMENT

ಸಂಭ್ರಮದ ತ್ರಿವರ್ಣ ಧ್ವಜ ಯಾತ್ರೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 11:26 IST
Last Updated 27 ಜನವರಿ 2020, 11:26 IST
ಚಿಟಗುಪ್ಪದಲ್ಲಿ ಬನಶಂಕರಿ ಶಾಲೆಯಿಂದ ಗಣರಾಜ್ಯೋತ್ಸವ ನಿಮಿತ್ತ ಒಂದು ಕಿ.ಮಿ ಉದ್ದದ ತ್ರಿವರ್ಣ ಧ್ವಜ ಯಾತ್ರೆ ನಡೆಯಿತು
ಚಿಟಗುಪ್ಪದಲ್ಲಿ ಬನಶಂಕರಿ ಶಾಲೆಯಿಂದ ಗಣರಾಜ್ಯೋತ್ಸವ ನಿಮಿತ್ತ ಒಂದು ಕಿ.ಮಿ ಉದ್ದದ ತ್ರಿವರ್ಣ ಧ್ವಜ ಯಾತ್ರೆ ನಡೆಯಿತು   

ಚಿಟಗುಪ್ಪ: ಪಟ್ಟಣದ ಬನಶಂಕರಿ ಶಾಲೆಯ ಮಕ್ಕಳಿಂದ ಗಣರಾಜ್ಯೋತ್ಸವ ನಿಮಿತ್ತ ಭಾನುವಾರ ಪಟ್ಟಣದಲ್ಲಿ ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜದ ಯಾತ್ರೆ ನಡೆಯಿತು.

ಭವಾನಿ ಮಂದಿರದಿಂದ ಆರಂಭವಾದ ಯಾತ್ರೆಯೂ ಪುರಸಭೆ ಕಚೇರಿ, ಪ್ರವಾಸಿ ಮಂದಿರ,
ಬಸವರಾಜ್ ಚೌಕ್, ಗಾಂಧಿ ಚೌಕ್, ನೆಹರು ಚೌಕ್, ಸರ್ದಾರ್‌ ವಲ್ಲಭಭಾಯಿ ಪಟೇಲ್ ಚೌಕ್, ಸುಭಾಷ ಚಂದ್ರ ಭೋಸ್ ಚೌಕ್, ನೂತನ ಬಸ್ ನಿಲ್ದಾಣ ಮಾರ್ಗವಾಗಿ ಶಿವಾಜಿ ಚೌಕ್ ಮಾರ್ಗದಿಂದ ಬನಶಂಕರಿ ಶಾಲೆಗೆ ಆಗಮಿಸಿ ಮುಕ್ತಾಯಗೊಂಡಿತು.

ಸಾರ್ವಜನಿಕರ ಗಮನ ಸೆಳೆದ ಬೃಹತ್ ಧ್ವಜವು ದೇಶಾಭಿಮಾನ ಜಾಗೃತಗೊಳಿಸಿತು. ದಾರಿಯ ಎರಡು ಬದಿಗಳ ಕಟ್ಟಡಗಳ ಮೇಲೆ ನಿಂತು ಸಾರ್ವಜನಿಕರು ಪುಷ್ಪಗಳ ಪೊಟ್ಟಣ ಹಿಡಿದುಕೊಂಡು ಧ್ವಜಕ್ಕೆ ಪುಷ್ಪ ಸುರಿದು ಗೌರವ ಸಮರ್ಪಿಸಿದರು.

ADVERTISEMENT

ಮಾಜಿ ಶಾಸಕ ಸುಭಾಷ ಕಲ್ಲೂರ್‌ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ,' ದೇಶಾಭಿಮಾನ, ರಾಷ್ಟ್ರೀಯತೆ, ಸ್ವಾಭಿಮಾನದ ಕಿಚ್ಚು ಎಲ್ಲರಲ್ಲಿ ಮೂಡಿಸಲು ಯಾತ್ರೆ ಪ್ರೇರಣೆಯಾಗಿದೆ, ದೇಶದ ಪ್ರಜೆಗಳಲ್ಲಿ ನಿಸ್ವಾರ್ಥ ಮನೋಭಾವ ಬೆಳೆಯಬೇಕು' ಎಂದರು.

ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್‌, ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ವೀರಣ್ಣ ಜಟ್ಲಾ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಸೂರ್ಯಕಾಂತ ಮಠಪತಿ, ಪುರಸಭೆ ಮಾಜಿ ಸದಸ್ಯ ರಾಜಕುಮಾರ ಗುತ್ತೆದಾರ್, ಸುಭಾಷ ಕುಂಬಾರ್, ಆಕಾಶ ಗುತ್ತೆದಾರ್, ಅನೀಲ ಜೋಶಿ, ಪುರಸಭೆ ಸದಸ್ಯ ಮುಜಾಫರಪಟೇಲ್, ರಮೇಶ್ ಚಿಟಗುಪ್ಪಾಕರ್, ಪುರಸಭೆ ಮಾಜಿ ಅಧ್ಯಕ್ಷರಾದ ದಿಲೀಪ ಕುಮಾರ ಬಗ್ದಲಕರ್, ಬಾಬಾ ಬುಖಾರಿ, ಗಣ್ಯರಾದ ಪ್ರವೀಣ ಮೇತ್ರಸ್ಕರ್, ಪವನ ಗುತ್ತೆದಾರ್.
ಪುರಸಭೆ ಸದಸ್ಯ ನಸೀರ್, ಬಾಬಾ, ಹಬೀಬ್, ಶಕೀಲ್, ತಹಸೀನ್, ಉದಯ ಬಬಡಿ, ಸುನೀಲ ದುದಗುಂಡಿ, ನಳಿನ ಕಂದಿ, ಪ್ರಶಾಂತ ಜವಳಿ, ಪದ್ಮಾ ಕಟಗಿ, ಸಚಿನ ಮಠಪತಿ, ಪರಮೇಶ್ ಬಬಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.