ADVERTISEMENT

ಬೀದರ್‌ ವಸತಿ ಶಾಲೆಗಳ ಕಳಪೆ ಸಾಧನೆ

ಬೀದರ್‌ ಜಿಲ್ಲೆಗೆ ಶೇ 77.05ರಷ್ಟು ಫಲಿತಾಂಶ; ರಾಜ್ಯದಲ್ಲಿ ಕೊನೆ ಸ್ಥಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಜುಲೈ 2025, 7:08 IST
Last Updated 1 ಜುಲೈ 2025, 7:08 IST
<div class="paragraphs"><p>ಸಾಂದರ್ಭಿಕ</p></div>

ಸಾಂದರ್ಭಿಕ

   

ಬೀದರ್‌: ಸಮಾಜ ಕಲ್ಯಾಣ ಇಲಾಖೆಯು ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರ ಫಲಿತಾಂಶ ಘೋಷಿಸಿದ್ದು, ಬೀದರ್‌ ಜಿಲ್ಲೆ ಕಳಪೆ ಸಾಧನೆ ತೋರಿದ್ದು, ರಾಜ್ಯದಲ್ಲಿಯೇ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಬೀದರ್‌ ವಸತಿ ಶಾಲೆಗಳಿಗೆ ಶೇ 77.05ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 29 ವಸತಿ ಶಾಲೆಗಳು ಕೆಲಸ ನಿರ್ವಹಿಸುತ್ತಿವೆ. ಕಲ್ಯಾಣ ಕರ್ನಾಟಕಕ್ಕೆ ಶೇ 87.9ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಅತಿ ಕಡಿಮೆ ಫಲಿತಾಂಶ ಗಳಿಸಿದೆ. ‌ಕಲ್ಯಾಣ ಕರ್ನಾಟಕದಲ್ಲಿ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳು ಉತ್ತಮ ಸಾಧನೆ ತೋರಿದ್ದು, ಶೇ 95.6ರಷ್ಟು ಫಲಿತಾಂಶ ಗಿಟ್ಟಿಸಿವೆ. ವಿಭಾಗೀಯ ಕೇಂದ್ರವೂ ಆಗಿರುವ ಕಲಬುರಗಿ ಜಿಲ್ಲೆಗೆ ಶೇ 77.13ರಷ್ಟು ಫಲಿತಾಂಶ ಬಂದಿದ್ದು, 30ನೇ ಸ್ಥಾನದಲ್ಲಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (ಕೆಆರ್‌ಇಐಎಸ್‌) ಅಡಿ ರಾಜ್ಯದಲ್ಲಿ ವಸತಿ ಶಾಲೆಗಳು ನಡೆಯುತ್ತಿವೆ.

ADVERTISEMENT

ಬೆಳಗಾವಿ ಉತ್ತಮ ಸಾಧನೆ:

ಬೆಳಗಾವಿ ವಿಭಾಗ ಉತ್ತಮ ಸಾಧನೆ ತೋರಿದ್ದು, ಶೇ 94.4 ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದೆ. ಶೇ 92.06 ಫಲಿತಾಂಶದೊಂದಿಗೆ ಮೈಸೂರು ವಿಭಾಗ ದ್ವಿತೀಯ ಮತ್ತು ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, ಶೇ 90.06 ಫಲಿತಾಂಶ ಬಂದಿದೆ. ಮೈಸೂರು ವಿಭಾಗ ವ್ಯಾಪ್ತಿಯ ಉಡುಪಿ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಗೆ ಶೇ 99.04ರಷ್ಟು ಫಲಿತಾಂಶ ಸಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.