ADVERTISEMENT

ಬೀದರ್: ವಿಮಾನಯಾನ ಸೇವೆ ಪುನರಾರಂಭಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 13:52 IST
Last Updated 25 ನವೆಂಬರ್ 2021, 13:52 IST
ಬಿ.ಜಿ.ಶೆಟಕಾರ
ಬಿ.ಜಿ.ಶೆಟಕಾರ   

ಬೀದರ್: ಬೀದರ್- ಬೆಂಗಳೂರು ನಡುವೆ ವಿಮಾನಯಾನ ಸೇವೆ ಪುನರಾರಂಭಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಒತ್ತಾಯಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ಈ ಕುರಿತು ಅವರು ಪತ್ರ ಬರೆದಿದ್ದಾರೆ.

ಜನರ ಬಹುದಿನಗಳ ಬೇಡಿಕೆ ಕಾರಣ ಉಡಾನ್ ಯೋಜನೆಯಡಿ ಬೀದರ್‍ನಿಂದ ನಾಗರಿಕ ವಿಮಾನಯಾನ ಸೇವೆ ಶುರು ಮಾಡಲಾಗಿತ್ತು. ಹೈದರಾಬಾದ್‍ನ ಪ್ರತಿಷ್ಠಿತ ಸಂಸ್ಥೆ ಇದರ ಹೊಣೆ ಹೊತ್ತುಕೊಂಡಿತ್ತು. ಆದರೆ, ಕಡಿಮೆ ಅವಧಿಯಲ್ಲೇ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಬೀದರ್‌ನ ವಿಮಾನ ನಿಲ್ದಾಣ ಕಚೇರಿಯನ್ನು ಸಂಪರ್ಕಿಸಿದರೂ, ಯಾವ ಕಾರಣಕ್ಕಾಗಿ ವಿಮಾನ ಸೇವೆ ನಿಲ್ಲಿಸಲಾಗಿದೆ ಎನ್ನುವ ಕುರಿತು ನಿಖರ ಮಾಹಿತಿ ದೊರಕುತ್ತಿಲ್ಲ ಎಂದು ಹೇಳಿದ್ದಾರೆ.

ಈ ಭಾಗದ ಜನರ ಹಿತದೃಷ್ಟಿಯಿಂದ ವಿಮಾನಯಾನ ಸೇವೆಯನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.