ಔರಾದ್: ಬೀದರ್—ಔರಾದ್ ಮುಖ್ಯ ರಸ್ತೆ ಧರಿ ಹನುಮಾನ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತರು ಜೊನ್ನೆಕೇರಿ ಗ್ರಾಮದ ಯುವರಾಜ ಶರಣಪ್ಪ ಬಿರಾದಾರ (32) ಎಂದು ಗುರುತಿಸಲಾಗಿದೆ. ಮೃತ ಯುವಕನಿಗೆ ಪತ್ನಿ, ಒಬ್ಬ ಪುತ್ರ, ತಂದೆ, ತಾಯಿ ಇದ್ದಾರೆ. ಬೈಕ್ ಸವಾರ ಬೀದರ್‌ನಿಂದ ಸಂತಪುರ ಕಡೆ ಹೋಗುವಾಗ ಎದುರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ನಡುವೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಂತಪುರ ಪೊಲೀಸರು ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.