ADVERTISEMENT

ಜನವಾಡ | ಸಚ್ಚಿದಾನಂದ ಸ್ವಾಮೀಜಿ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:35 IST
Last Updated 21 ಅಕ್ಟೋಬರ್ 2025, 4:35 IST
ಬೀದರ್ ತಾಲ್ಲೂಕಿನ ಬೆಳ್ಳೂರು ಗ್ರಾಮದ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಸಿದ್ಧಾರೂಢರ ವಾರ್ಷಿಕೋತ್ಸವ ಹಾಗೂ ಸಚ್ಚಿದಾನಂದ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಗುರುದೇವಾಶ್ರಮದ ಗಣೇಶಾನಂದ ಮಹಾರಾಜ ಮಾತನಾಡಿದರು
ಬೀದರ್ ತಾಲ್ಲೂಕಿನ ಬೆಳ್ಳೂರು ಗ್ರಾಮದ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಸಿದ್ಧಾರೂಢರ ವಾರ್ಷಿಕೋತ್ಸವ ಹಾಗೂ ಸಚ್ಚಿದಾನಂದ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಗುರುದೇವಾಶ್ರಮದ ಗಣೇಶಾನಂದ ಮಹಾರಾಜ ಮಾತನಾಡಿದರು   

ಬೆಳ್ಳೂರು: ಬೀದರ್ ತಾಲ್ಲೂಕಿನ ಬೆಳ್ಳೂರು ಗ್ರಾಮದ ಸಚ್ಚಿದಾನಂದ ಆಶ್ರಮದಲ್ಲಿ ಸಿದ್ಧಾರೂಢರ 19ನೇ ವಾರ್ಷಿಕೋತ್ಸವ ಹಾಗೂ ಸಚ್ಚಿದಾನಂದ ಸ್ವಾಮೀಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮ ಈಚೆಗೆ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗುರುದೇವಾಶ್ರಮದ ಗಣೇಶಾನಂದ ಮಹಾರಾಜರು, ಸತ್ಸಂಗ ಭವಸಾಗರ ದಾಟಿಸುವ ನೌಕೆ ಎಂದು ಬಣ್ಣಿಸಿದರು.

ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಆಶ್ರಮದ ಮಾತೆ ಅಮೃತಾನಂದಮಯಿ, ಗೋಪಾಲ ಶಾಸ್ತ್ರಿ, ಗುಂಡಪ್ಪ, ಮಾತೆ ಸಂಗೀತಾದೇವಿ, ಸದ್ರೂಪಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.

ADVERTISEMENT

ಡಾ.ನೀತಾ ಬೆಲ್ದಾಳೆ, ಶಿವಕುಮಾರ ಪಟಪಳ್ಳಿ, ರಾಜಕುಮಾರ ಗುರಮ್, ಕಸ್ತೂರಿ ಪಟಪಳ್ಳಿ, ಬಸಪ್ಪ ಮಡಿವಾಳ, ಸಿದ್ದಪ್ಪ ಪಟಪಳ್ಳಿ, ಶಾಂತಕುಮಾರ ಚಂದಾ, ಕಾಶಿನಾಥ ಗುಮ್ಮಾ ಮೊದಲಾದವರು ಇದ್ದರು.

ಸಂಜುರೆಡ್ಡಿ ಝಂಪಾ ಸ್ವಾಗತಿಸಿದರು. ಸವಿತಾ ಗುರುನಾಥ ನಿರೂಪಿಸಿದರು. ಭೀಮರೆಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.