ADVERTISEMENT

`ಸಾಹಿತಿ ಸಂಗಮ’ ಕಾರ್ಯಕ್ರಮ ಇಂದು

ಲೇಖಕರ ಮನೆಗೆ ಸಚಿವ ಪ್ರಭು ಚವಾಣ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 15:42 IST
Last Updated 3 ನವೆಂಬರ್ 2020, 15:42 IST

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ನ.4ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಸಾಹಿತಿ ಸಂಗಮ’ ಕಾರ್ಯಕ್ರಮದಡಿ ನಗರದ ವಿವಿಧ ಸಾಹಿತಿಗಳ ಮನೆಗೆ ಭೇಟಿ ನೀಡಿ, ಸಾಹಿತ್ಯ ಕೃತಿಗಳ ವಿತರಣೆ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ನಗರದ ಕುಂಬರವಾಡಾ ರಸ್ತೆಯಲ್ಲಿರುವ ಡಾ.ಸಂಜೀವಕುಮಾರ ಅತಿವಾಳೆ, ವಿವೇಕಾನಂದ ಕಾಲೊನಿಯಲ್ಲಿ ರಮೇಶ ಬಿರಾದಾರ, ಪ್ರೊ.ಎಸ್.ವಿ.ಕಲ್ಮಠ್, ಕೃಷಿ ಕಾಲೊನಿಯಲ್ಲಿ ರಘುನಾಥ ಹಡಪದ, ಸುನೀತಾ ಬಿರಾದಾರ, ರಜಿಯಾ ಬಳಬಟ್ಟಿ, ಶಿವನಗರ (ದಕ್ಷಿಣ)ದಲ್ಲಿ ಮೇನಕಾ ಪಾಟೀಲ, ಗುರುನಾಥ ಅಕ್ಕಣ್ಣ, ಜಗದೇವಿ ದುಬಲಗುಂಡಿ, ಪುಷ್ಪಾ ಕನಕ, ಆನಂದನಗರದಲ್ಲಿ ಡಾ.ಕಾಶೀನಾಥ ಚಲುವಾ, ಎಸ್.ಎಂ.ಜನವಾಡಕರ್, ಪ್ರತಾಪನಗರದಲ್ಲಿ ಶ್ರೀದೇವಿ ಹೂಗಾರ, ಕೆಎಚ್‍ಬಿ ಕಾಲೊನಿಯಲ್ಲಿ ಪ್ರೊ.ಓಂಪ್ರಕಾಶ ದಡ್ಡೆ, ಡಾ.ರಘುಶಂಖ ಭಾತಂಬ್ರಾ, ಸುನೀತಾ ದಾಡಗೆ, ಸುಭಾಷ ನೇಳಗೆ, ಬಸವಗಿರಿಯಲ್ಲಿ ಡಾ.ಗಂಗಾಂಬಿಕಾ ಅಕ್ಕ ಹಾಗೂ ಶಿವನಗರ(ಉತ್ತರ)ದಲ್ಲಿ ಸಾಧನಾ ರಂಜೋಳಕರ್ ಅವರನ್ನು ಭೇಟಿ ಮಾಡಿ ಸನ್ಮಾನಿಸುವರು.

‘ನಾಲ್ದೇರಾ' ಕೃತಿ ಬಿಡುಗಡೆ: ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಅವರ ಪ್ರವಾಸ ಕಥನ 'ನಾಲ್ದೇರಾ' ಕೃತಿಯ ಬಿಡುಗಡೆ ಕಾರ್ಯಕ್ರಮ 4ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೃಷಿ ಕಾಲೊನಿಯಲ್ಲಿರುವ ನಿವಾಸದಲ್ಲಿ ನಡೆಯಲಿದೆ.

ಸಚಿವ ಪ್ರಭು ಚವಾಣ್ ಕೃತಿ ಬಿಡುಗಡೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಹಿರಿಯ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.