ADVERTISEMENT

ಜಾನಪದ ಸಾಹಿತ್ಯ ಉಳಿಸಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:22 IST
Last Updated 8 ಫೆಬ್ರುವರಿ 2021, 17:22 IST
ಬೀದರ್‌ನಲ್ಲಿ ಸೋಮವಾರ ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಮ್ಮೇಳನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಭಕ್ತಿ ಪಾಟೀಲ ಕವನ ವಾಚನ ಗಮನ ಸೆಳೆಯಿತು
ಬೀದರ್‌ನಲ್ಲಿ ಸೋಮವಾರ ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಮ್ಮೇಳನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಭಕ್ತಿ ಪಾಟೀಲ ಕವನ ವಾಚನ ಗಮನ ಸೆಳೆಯಿತು   

ಬೀದರ್: ‘ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಯಿಂದ ವಿಶ್ವ ಜಾನಪದ ಸಾಹಿತ್ಯದ ಉಗಮವಾಗಿದೆ. ಅಳಿವಿನಂಚಿನಲ್ಲಿರುವ ಜಾನಪದ ಸಾಹಿತ್ಯ ಉಳಿಸುವ ಕಾರ್ಯ ನಡೆಯಬೇಕು’ ಎಂದು ಯುವ ಸಾಹಿತಿ ನಾಗಯ್ಯ ಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಮ್ಮೇಳನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಾನಪದ ಸಾಹಿತ್ಯದಲ್ಲಿ ವಿಜ್ಞಾನ, ಅಧ್ಯಾತ್ಮ ಹಾಗೂ ನೈತಿಕ ಮೌಲ್ಯಗಳ ಪ್ರತಿಪಾದನೆ ಕಾಣಬಹುದಾಗಿದೆ. ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ಜಾನಪದದ ಮಹತ್ವ ತಿಳಿಸಿಕೊಡುವ ಕೆಲಸವನ್ನು ಪಾಲಕರು ಮಾಡಬೇಕು’ ಎಂದರು ಹೇಳಿದರು.

ADVERTISEMENT

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಧ್ಯಾಪಕಿ ಡಾ.ಶ್ರೇಯ ಮಹೇಂದ್ರಕರ್ ಮಾತನಾಡಿ, ‘ಜನಪದದಲ್ಲಿ ಪುರಾಣ. ಗಾದೆ, ಒಗಟು, ಒಡಪು ಹಾಗೂ ಕಲೆ ಇದೆ’ ಎಂದರು.

ಸಾಹಿತಿ ಬಸವರಾಜ ಮೂಲಗೆ, ಶ್ರೀಕಾಂತ ಬಿರಾದಾರ, ಮಹಿಳಾ ಸಾಹಿತಿ ಶೈಲಜಾ ಹುಡಗೆ, ಸ್ವರೂಪಾ ಪಾಟೀಲ ಮಾತನಾಡಿದರು.

ಕವಿಗಳಾದ ರಮೇಶ ಸಲಗರ, ಲಕ್ಷ್ಮಣರಾವ್ ಕಾಂಚೆ, ಶಿವರಾಜ ಮೇತ್ರೆ, ಸಂಗಮೇಶ್ವರ ಮುರ್ಕೆ, ನಾಗಮ್ಮ ಭಂಗರಗಿ, ಓಂಕಾರ ಪಾಟೀಲ, ಅರವಿಂದ ಕುಲಕರ್ಣಿ, ರವಿದಾಸ ಕಾಂಬಳೆ, ಭಕ್ತಿ ಪಾಟೀಲ, ಪ್ರಾರ್ಥನಾ ಮೊದಲಾದವರು ಸ್ವರಚಿತ ಕವನ ವಾಚನ ಮಾಡಿದರು.

ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಮೀರಾ ಖೇಣಿ ನಿರೂಪಿಸಿದರು. ಗಂಗಮ್ಮ ಫುಲೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.