ADVERTISEMENT

ಬೀದರ್‌: ಸಂವಿಧಾನ ಉಳಿಸಿ ದೇಶ ಉಳಿಸಿ ಕಾರ್ಯಕ್ರಮ 26ಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 12:39 IST
Last Updated 4 ಜನವರಿ 2022, 12:39 IST

ಬೀದರ್‌: ಕರ್ನಾಟಕ ರಾಜ್ಯ ದಲಿತ ಸಂರ್ಘಷ ಸಮಿತಿಯು ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್ ನೇತೃತ್ವದಲ್ಲಿ ಸೋಮವಾರ ಸಭೆ ಸೇರಿ ಜನವರಿ 26ರಂದು ಸಂಜೆ 4:30ಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದ ಬಳಿ ಬಹಿರಂಗ ವೇದಿಕೆಯಲ್ಲಿ ‘ಸಂವಿಧಾನ ಉಳಿಸಿ, ದೇಶ ಉಳಿಸಿ’ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ.

ಸಮಿತಿಯ ಜಿಲ್ಲಾ ಹಾಗೂ ತಾಲ್ಲೂಕಿನ ಪಧಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ಭಾಷಣಕಾರರು ಹಾಗೂ ದಲಿತ ಸಾಹಿತಿಗಳಿಗೆ ಆಹ್ವಾನ ನೀಡಲು ಸಭೆಯಲ್ಲಿ ತೀರ್ಮಾನಿಸಿದೆ.

73ನೇ ಗಣರಾಜ್ಯೋತ್ಸವ ನಿಮಿತ್ತ ಸಂವಿಧಾನ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಸಂಧರ್ಭದಲ್ಲಿ ಸಾಮಾಜಿಕ ಜಾಲತಾಣದ ವಿಭಾಗದ ಜಿಲ್ಲಾ ಸಂಚಾಲಕರನ್ನಾಗಿ ಬಲಭೀಮ ಭಾವಿಡೊಡ್ಡಿ ಅವರನ್ನು ಆಯ್ಕೆ ಮಾಡಲಾಯಿತು.

ADVERTISEMENT

ಸಭೆಯಲ್ಲಿ ಜಾನ್ಸನ್ ಘೋಡೆ, ನರಸಿಂಗ್ ಸಾಮ್ರಟ್, ಶಿವಕುಮಾರ ದೇವಕರ್, ರಾಜರತ್ನ ಶಿಂಧೆ, ಖಂಡಪ್ಪ ಪಾತರಪಳ್ಳಿ, ಜೈಭೀಮ, ನವಿನ್ ಅಲ್ಲಪೂರೆ, ಸಂಜು ನುಸೆ, ಪವನ್ ಗುನ್ನಳಿ,ವಿಜಯ ಸಾಮ್ರಾಟ್, ಸುನೀಲ ಪವಾರ್, ಸೂರ್ಯಕಾಂತ ಬೆಲ್ದಾರ್, ಸಂದೀಪ ಕಟ್ಟಿಮನಿ, ಲಕ್ಷ್ಮಣ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.