ADVERTISEMENT

ಧಾನ್ಯ ಶುಚಿಗೊಳಿಸುವಿಕೆ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 20:00 IST
Last Updated 3 ಡಿಸೆಂಬರ್ 2019, 20:00 IST
ಬೀದರ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಧಾನ್ಯ ಶುಚಿಗೊಳಿಸುವಿಕೆ, ಶ್ರೇಣೀಕರಣ ಹಾಗೂ ಪ್ಯಾಕಿಂಗ್ ಘಟಕಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಚಾಲನೆ ನೀಡಿದರು
ಬೀದರ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಧಾನ್ಯ ಶುಚಿಗೊಳಿಸುವಿಕೆ, ಶ್ರೇಣೀಕರಣ ಹಾಗೂ ಪ್ಯಾಕಿಂಗ್ ಘಟಕಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಚಾಲನೆ ನೀಡಿದರು   

ಬೀದರ್: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಧಾನ್ಯ ಶುಚಿಗೊಳಿಸುವಿಕೆ, ಶ್ರೇಣೀಕರಣ ಹಾಗೂ ಪ್ಯಾಕಿಂಗ್ ಘಟಕವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಉದ್ಘಾಟಿಸಿದರು.

‘ರೈತರ ಅನುಕೂಲಕ್ಕಾಗಿ ಆರ್.ಕೆ.ವಿ.ವೈ ಯೋಜನೆ ಅಡಿಯಲ್ಲಿ ಘಟಕ ಸ್ಥಾಪನೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

‘ರೈತರು ತಾವು ಬೆಳೆದ ಉದ್ದು, ಹೆಸರು, ತೊಗರಿ, ಕಡಲೆ, ಸೋಯಾಬೀನ್ ಅನ್ನು ಘಟಕದಲ್ಲಿ ಶುಚಿಗೊಳಿಸಿಕೊಂಡು ಮಾರಾಟ ಮಾಡಿದ್ದಲ್ಲಿ ಯೋಗ್ಯ ಬೆಲೆ ದೊರಕಲಿದೆ. ಹೀಗಾಗಿ ರೈತರು ಘಟಕದ ಲಾಭ ಪಡೆಯಬೇಕು’ ಎಂದು ಮನವಿ ಮಾಡಿದರು.

ADVERTISEMENT

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶಿವಶರಣಪ್ಪ ಮಜಗೆ, ಸದಸ್ಯರಾದ ಮಾರುತಿ ಚಾಂಬೋಳ, ಬಸವರಾಜ ಶರ್ಮಾ, ವಿದ್ಯಾವತಿ ಚಂದ್ರಶೇಖರ ವಡ್ಡಿ, ಶಂಕರೆಪ್ಪ ಯಾಬಾ, ಸಮಿತಿಯ ಸಂತೋಷ ಮುದ್ದಾ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.