ADVERTISEMENT

ಶರಣಬಸವಪ್ಪ ಅಪ್ಪ ಮೂರ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 15:04 IST
Last Updated 5 ಜುಲೈ 2021, 15:04 IST
ಬೀದರ್ ತಾಲ್ಲೂಕಿನ ಗೋರನಳ್ಳಿಯ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ ಅವರ ಮೂರ್ತಿ ಅನಾವರಣ ಮಾಡಲಾಯಿತು
ಬೀದರ್ ತಾಲ್ಲೂಕಿನ ಗೋರನಳ್ಳಿಯ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ ಅವರ ಮೂರ್ತಿ ಅನಾವರಣ ಮಾಡಲಾಯಿತು   

ಬೀದರ್: ತಾಲ್ಲೂಕಿನ ಗೋರನಳ್ಳಿಯಲ್ಲಿ ಇರುವ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ ಅವರ ಮೂರ್ತಿಯನ್ನು ಸೋಮವಾರ ಅನಾವರಣಗೊಳಿಸಲಾಯಿತು.

ಶರಣಬಸವಪ್ಪ ಅಪ್ಪ ಅವರ ಪುತ್ರಿಯರಾದ ಶಿವಾನಿ, ಕೋಮಲಾ ಹಾಗೂ ಮಹೇಶ್ವರಿ ಅವರು ಜಂಟಿಯಾಗಿ ಮೂರ್ತಿ ಹಾಗೂ ನೈಸರ್ಗಿಕ ಜಲ ಸಂಗ್ರಹ ಘಟಕವನ್ನು ಅನಾವರಣ ಮಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ’ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಕಾಲೇಜಿನಲ್ಲಿ ಅವರ ಮೂರ್ತಿ ಸ್ಥಾಪಿಸಿರುವುದು ಸಂತಸದ ಸಂಗತಿಯಾಗಿದೆ‘ ಎಂದು ಹೇಳಿದರು.

ADVERTISEMENT

ಕಾಲೇಜಿನಲ್ಲಿ ಅಳವಡಿಸಿರುವ ಮಳೆ ನೀರು ಸಂಗ್ರಹ ವ್ಯವಸ್ಥೆಯು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯರಾದ ಡಾ.ವಿನಿತಾ ಪಾಟೀಲ ಮಾತನಾಡಿ, ’ನಿಸರ್ಗದಲ್ಲಿ ಆಗಿರುವ ಬದಲಾವಣೆಗಳ ಕಾರಣ ಪ್ರಸ್ತುತ ಸಕಾಲಕ್ಕೆ ಅಗತ್ಯ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ನೀರನ್ನು ಹಿತ ಮಿತವಾಗಿ ಬಳಸಬೇಕಿದೆ. ಮಳೆ ನೀರು ಸಂಗ್ರಹಿಸಿ, ಅಂತರ್ಜಲ ಹೆಚ್ಚಳಕ್ಕೆ ಬಳಸಿಕೊಳ್ಳಬೇಕಿದೆ‘ ಎಂದು ಹೇಳಿದರು.

ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕ ಶರಣಬಸಪ್ಪ ದೇಶಮುಖ ಮಾತನಾಡಿದರು. ಡಾ. ಉಮಾ ಬಿ. ದೇಶಮುಖ, ಡಾ. ಅಲ್ಲಂ, ಡಾ. ಮಲ್ಲಿಕಾರ್ಜುನ, ಕುಮಾರ ದೇಶಮುಖ, ಶರಣಬಸವ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸತೀಶ ಪ್ರತಾಪುರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.