ಬಸವಕಲ್ಯಾಣ: ‘ಛತ್ರಪತಿ ಶಿವಾಜಿ ಮಹಾರಾಜರ ಜೀವನ ಸಾಧನೆ ಪ್ರತಿಬಿಂಬಿಸುವ ನಗರದ ಕ್ರೀಡಾಂಗಣದ ಹಿಂದುಗಡೆ 10 ಎಕರೆಯಲ್ಲಿ ನಿರ್ಮಿಸುತ್ತಿರುವ ಶಿವಸೃಷ್ಟಿಗಾಗಿ ₹3 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಶಾಸಕ ಶರಣು ಸಲಗರ ಹೇಳಿದರು.
ಶಿವಸೃಷ್ಟಿ ಸಮಿತಿ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತು ಹಾಗೂ ಮರಾಠಾ ಸಮಾಜ ಮುಖಂಡರಿಂದ ಶಿವಸೃಷ್ಟಿಗೆ ಅನುದಾನ ನೀಡಿದಕ್ಕಾಗಿ ಹಾಗೂ ಜಂಟಿ ಅಧಿವೇಶನದಲ್ಲಿ ಈ ಬಗ್ಗೆ ಬೇಡಿಕೆ ಮಂಡಿಸಿದಕ್ಕಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
₹1 ಕೋಟಿ ಅನುದಾನದಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಮತ್ತೆ ₹2 ಕೋಟಿ ನೀಡಿದ್ದೇನೆ. ಪ್ರತಿ ವರ್ಷವೂ ಅನುದಾನ ನೀಡುತ್ತೇನೆ. ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಆಗ್ರಹಿಸಿ ಇದೊಂದು ಪ್ರೇರಣೆ ನೀಡುವ ತಾಣವಾಗಿ ರೂಪುಗೊಳಿಸಲಾಗುವುದು’ ಎಂದರು.
ಶಿವಸೃಷ್ಟಿ ಸಮಿತಿ ಕಾರ್ಯದರ್ಶಿ ತಾತೇರಾವ್ ಪಾಟೀಲ ಮಾತನಾಡಿ, ‘ಶಾಸಕ ಶರಣು ಸಲಗರ ಅವರ ಅನುದಾನದಿಂದ ಶಿವಸೃಷ್ಟಿ ಕಾಮಗಾರಿ ಆರಂಭ ಆಗಿದೆ. ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಸಹ ಈ ಕೆಲಸಕ್ಕಾಗಿ ಅನುದಾನ ಒದಗಿಸಲು ಆಗ್ರಹಿಸಿ ಇವರು ಬೇಡಿಕೆ ಮಂಡಿಸಿರುವುದಕ್ಕೆ ಸಂತಸವಾಗಿದೆ’ ಎಂದರು.
ಬಿಜೆಪಿ ಮುಖಂಡ ಶಂಕರರಾವ್ ನಾಗದೆ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋವಿಂದರಾವ್ ಸೋಮವಂಶಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜ್ಞಾನೇಶ್ವರ ಮುಳೆ, ಮುಖಂಡರಾದ ಶ್ರೀನಿವಾಸ ಪಾಟೀಲ, ರಂಜೀತ್ ಗಾಯಕವಾಡ, ಷಹಾಜಿ ಭೋಸ್ಲೆ, ಕಮಲಾಕರ ಪಾಟೀಲ, ಕೃಷ್ಣಾ ಗೋಣೆ, ಅಭಿಮನ್ಯು ಪಾಟೀಲ, ಸುಧಾಕರ ಮದನೆ, ಬಾಬುರಾವ ಹಿಂಶೆ, ರಾಜೀವ ವಾಡೇಕರ್, ರೋಹಿದಾಸ ಬಿರಾದಾರ, ರಮಾಕಾಂತ ನಿರ್ಗುಡಿ, ಜ್ಞಾನೇಶ್ವರ ಆಲಗೂಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.