ಹೊನ್ನಿಕೇರಿ(ಜನವಾಡ): ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಸಮೀಪ ಸಿದ್ಧೇಶ್ವರ ದೇಗುಲಕ್ಕೆ ನಿರ್ಮಿಸಿದ ನೂತನ ಮಹಾದ್ವಾರವನ್ನು ಸೋಮವಾರ ಉದ್ಘಾಟಿಸಲಾಯಿತು.
ಹುಡಗಿಯ ವಿರೂಪಾಕ್ಷ ಶಿವಾಚಾರ್ಯ ಹಾಗೂ ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ ಜಂಟಿಯಾಗಿ ಮಹಾದ್ವಾರ ಉದ್ಘಾಟಿಸಿದರು.
ಇದಕ್ಕೂ ಮಹಾದ್ವಾರದ ಮೇಲಿನ ಐದು ಗೋಪುರಗಳಿಗೆ ಕಳಸಾರೋಹಣ ನಡೆಯಿತು. ಹೋಮ, ಹವನ ಕಾರ್ಯಕ್ರಮಗಳೂ ಜರುಗಿದವು.
ಕಪಲಾಪುರದ ಪೂರ್ಣಾನಂದ ಶಿವಾಚಾರ್ಯ, ಭಾಲ್ಕಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಮುಖಂಡರಾದ ಸಂಗಮೇಶ ಪಾಟೀಲ, ದತ್ತಾತ್ರಿ ಮೂಲಗೆ, ವಿದ್ಯಾಸಾಗರ್ ಪಾಟೀಲ, ಮಲ್ಲಿಕಾರ್ಜುನ ತಾಂಬಳ್ಳೆ, ಮಲ್ಲಿಕಾರ್ಜುನ ಕೋಟೆ, ಶಾಮರಾವ್ ಸುಲಗುಂಟೆ, ಪ್ರಭುಲಿಂಗ ಬೆಣ್ಣೆ ಮೊದಲಾದವರು ಇದ್ದರು.
ಮಹಾದ್ವಾರ ಉದ್ಘಾಟನೆ ಅಂಗವಾಗಿ ಭಾನುವಾರ ಹೊನ್ನಿಕೇರಿಯ ಸಿದ್ಧೇಶ್ವರ ದೇಗುಲದಲ್ಲಿ ಪೂಜೆ ಜರುಗಿತು. ದೇವಸ್ಥಾನದಿಂದ ಮಹಾದ್ವಾರದ ವರೆಗೆ ಕಳಸಗಳ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.