ADVERTISEMENT

ಉಪ್ಪು, ಸಕ್ಕರೆ ಸೇವನೆ ಮಿತ, ಕಿಡ್ನಿಗೆ ಹಿತ- ಡಾ. ಸಿ. ಆನಂದರಾವ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 13:23 IST
Last Updated 13 ಮಾರ್ಚ್ 2022, 13:23 IST
ಬೀದರ್‌ನ ಸ್ವಾತಿ ನರ್ಸಿಂಗ್ ಹೋಮ್‌ನಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಡಾ. ಸಿ. ಆನಂದರಾವ್‌ ಉದ್ಘಾಟಿಸಿದರು
ಬೀದರ್‌ನ ಸ್ವಾತಿ ನರ್ಸಿಂಗ್ ಹೋಮ್‌ನಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಡಾ. ಸಿ. ಆನಂದರಾವ್‌ ಉದ್ಘಾಟಿಸಿದರು   

ಬೀದರ್‌: ಮೂತ್ರಪಿಂಡಗಳು ದೇಹದ ದ್ರವ ತ್ಯಾಜ್ಯವನ್ನು ಸೋಸುತ್ತವೆ. ‌ಕಿಡ್ನಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾದರೆ ಸಮತೋಲಿತ ಆಹಾರ ಸೇವನೆ ಮಾಡಬೇಕು. ಉಪ್ಪು ಹಾಗೂ ಸಕ್ಕರೆಯನ್ನು ಮಿತವಾಗಿ ಸೇವಿಸಬೇಕು ಎಂದು ಡಾ. ಸಿ. ಆನಂದರಾವ್‌ ಹೇಳಿದರು.

ನಗರದ ಸ್ವಾತಿ ನರ್ಸಿಂಗ್ ಹೋಮ್‌ನಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.

ದೇಹ ಉತ್ತಮ ಸ್ಥಿತಿಯಲ್ಲಿ ಇರಬೇಕಾದರೆ ನಿಯಮಿತವಾಗಿ ವ್ಯಾಯಮ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿ, ಮಿದುಳು ಹಾಗೂ ಹೃದಯದಂತೆ ಕಿಡ್ನಿ ಸಹ ಸೂಕ್ಷ್ಮವಾದ ಅಂಗ. ಇದು ಅತಿ ಹೆಚ್ಚು ಕಾರ್ಯನಿರ್ವಸುವ ಅಂಗ, ರಕ್ತ ಶುದ್ಧಿ ಕಾರ್ಯ ನಂತರ ಮೂತ್ರದ ಮೂಲಕ ತ್ಯಾಜ್ಯ ಹೊರಹಾಕಲು ಹಾಗೂ ಖನಿಜಗಳನ್ನು ಸಮತೋಲನ ಗೊಳಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಜ್ಞಾನ ಶಿಕ್ಷಕ ಸಂಜೀವಕುಮಾರ ಸ್ವಾಮಿ ಮಾತನಾಡಿದರು. ಕರ್ನಾಟಕ ರಾಜ್ಯ ಶಿಕ್ಷಕ ವಿಕಾಸ ಪರಿಷತ್ತಿನ ಉಪಾಧ್ಯಕ್ಷ ಮನೋಹರ ಸಿಂಗ್ ಪಾಟೀಲ, ಅಲ್ಪಾ, ಅನಂತ ಕುಲಕರ್ಣಿ ಇದ್ದರು.

ಡಾ. ಚಲಮಲ್ ಆನಂದರಾವ್ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಹೈದರಾಬಾರ್ ಕರ್ನಾಟಕ ನಾಗರಿಕರ ವೇದಿಕೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.