ADVERTISEMENT

ಸಮಾಜದ ಒಳಿತಿಗೆ ಶ್ರಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 10:20 IST
Last Updated 29 ಡಿಸೆಂಬರ್ 2019, 10:20 IST
ಹ್ಯಾಂಡ್‌ಬಾಲ್‌ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಮರ್ಲಿನ್ ಬ್ಲೆಸ್ಸಿ ಅವರನ್ನು ಬೀದರ್‌ನ ಗುರುನಾನಕ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸನ್ಮಾನಿಸಲಾಯಿತು
ಹ್ಯಾಂಡ್‌ಬಾಲ್‌ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಮರ್ಲಿನ್ ಬ್ಲೆಸ್ಸಿ ಅವರನ್ನು ಬೀದರ್‌ನ ಗುರುನಾನಕ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸನ್ಮಾನಿಸಲಾಯಿತು   

ಹುಮನಾಬಾದ: ‘ಯುವ ಜನಾಂಗ ಶ್ರದ್ಧೆಯಿಂದ ಓದಿನಲ್ಲಿ ತೊಡಗುವ ಮೂಲಕ ಗುರಿ ಸಾಧಿಸಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ತಾಲ್ಲೂಕಿನ ದುಬಲಗುಂಡಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗಾಗಿ ಶನಿವಾರ ಆಯೋಜಿಸಿದ್ದ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ಜನಾಂಗ ಆಧ್ಯಾತ್ಮದ ಕಡೆಗೆ ಒಲವು ಬೆಳಸಿಕೊಳ್ಳಬೇಕು. ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ ಹಾಗೂ ಸಹಕಾರದಿಂದ ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದು ಹೇಳಿದರು.

ADVERTISEMENT

ಮಹಾರುದ್ರಪ್ಪ ಕುಡಂಬಲ ಗುರುಸ್ವಾಮಿಗಳ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಶ್ರೀವಿಷ್ಣೇಶ್ವರ, ಸುಬ್ರಹ್ಮಣ್ಯ, ಅಯ್ಯಪ್ಪ ಸ್ವಾಮಿಗಳಿಗೆ ಅಭಿಷೇಕ ನೆರವೇರಿಸಿದ ಅಯ್ಯಪ್ಪ ಭಕ್ತರು ಮಹಾಶಾಸ್ತ್ರ, ಲಕ್ಷಾರ್ಚನೆ, ವಿಷ್ಣು ಸಹಸ್ರ ಅಷ್ಟೋತ್ತರ ಶತನಾಮಾವಳಿ ಪೂಜೆ ಕೈಗೊಂಡರು.

ಮಹಾಂತೇಶ ಪೂಜಾರಿ, ವಿನಾಯಕ ಯಾದವ, ಮಲ್ಲಿಕಾರ್ಜುನ ಸೀಗಿ, ತಾ.ಪಂ ಸದಸ್ಯ ಪರಮೇಶ ಕಾಳಮದರಗಿ, ಸಚಿನ್‌ ಪಾಟೀಲ, ಬಾಬು ಟೈಗರ್, ಶರಣು ಮಠಪತಿ, ನಾಗರಾಜ ಚಂದನಕೇರಿ, ಚೇತನ ಡೆಗೆರಿ, ಪ್ರವೀಣ ಬೊಮ್ಮಣಿ, ಅಂತು ಗಂಗಾ, ಸತೀಷ ಪಸರ್ಗಿ, ಅಮರ ನಿಂಬೂರೆ, ಸಂತೋಷ ಉದಗೀರೆ, ಬಸವರಾಜ ಪಾಟೀಲ, ಅಭಿಷೇಕ ಪಟೀಲ, ರಾಕೇಶ, ಲೋಕೇಶ್ ದಿಗಂಬರ, ಭಗತ ಠಾಕೋರ, ರಾಹುಲ ಪರಿಟ್ ಹಾಗೂ ನಾಗೇಶ ಶೆರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.