ADVERTISEMENT

ಬೀದರ್ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 14:31 IST
Last Updated 21 ಜೂನ್ 2021, 14:31 IST

ಬೀದರ್: ಜಿಲ್ಲೆಯಲ್ಲಿ ಜೂನ್ 19ರ ವರೆಗೆ ಶೇ 24 ರಷ್ಟು ಅಂದರೆ 90,349 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್ ತಿಳಿಸಿದ್ದಾರೆ.


ಸೋಯಾಅವರೆ 44,400 ಹೆಕ್ಟೇರ್, ಕಬ್ಬು 16,374 ಹೆಕ್ಟೇರ್, ತೊಗರಿ 11,400 ಹೆಕ್ಟೇರ್, ಹೆಸರು 8,739 ಹೆಕ್ಟೇರ್, ಉದ್ದು 6,950 ಹೆಕ್ಟೇರ್ ಹಾಗೂ ಹೈಬ್ರಿಡ್ ಜೋಳ 1,970 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಉಳಿದ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಗುರಿ 3,70,982 ಹೆಕ್ಟೇರ್ ಆಗಿದೆ. ಇದರಲ್ಲಿ ಸೋಯಾ ಅವರೆ 1,82,448 ಹೆಕ್ಟೇರ್, ತೊಗರಿ 87,952 ಹೆಕ್ಟೇರ್, ಹೆಸರು 28,345 ಹೆಕ್ಟೇರ್, ಉದ್ದು 25,572 ಹೆಕ್ಟೇರ್, ಕಬ್ಬು 21,828 ಹೆಕ್ಟೇರ್ ಹಾಗೂ ಹೈಬ್ರಿಡ್ ಜೋಳ 13,567 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

1,82,448 ಹೆಕ್ಟೇರ್ ಪ್ರದೇಶಕ್ಕೆ 1,14,954 ಕ್ವಿಂಟಲ್ ಸೋಯಾ ಅವರೆ ಬಿತ್ತನೆ ಬೀಜದ ಅವಶ್ಯಕತೆ ಇದೆ. ಈವರೆಗೆ 1,01,584 ಕ್ವಿಂಟಲ್ ಬೀಜ ಸರಬರಾಜು ಮಾಡಲು ಇಂಡೆಂಟ್ ನೀಡಲಾಗಿತ್ತು. ಈ ಪೈಕಿ 93,300 ಕ್ವಿಂಟಲ್ ಬೀಜ ಪೂರೈಕೆ ಆಗಿದೆ ಎಂದು ಹೇಳಿದ್ದಾರೆ.

ಔರಾದ್ ತಾಲ್ಲೂಕಿಗೆ 29,179 ಕ್ವಿಂಟಲ್, ಬೀದರ್ ತಾಲ್ಲೂಕಿಗೆ 10,440 ಕ್ವಿಂಟಲ್, ಭಾಲ್ಕಿ ತಾಲ್ಲೂಕಿಗೆ 25,796 ಕ್ವಿಂಟಲ್, ಬಸವಕಲ್ಯಾಣ ತಾಲ್ಲೂಕಿಗೆ 14,806 ಕ್ವಿಂಟಲ್, ಹುಮನಾಬಾದ್ ತಾಲ್ಲೂಕಿಗೆ 12,729 ಕ್ವಿಂಟಲ್ ಸೋಯಾ ಬೀಜ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವರ್ಷ 78,956 ಕ್ವಿಂಟಲ್ ಸೋಯಾಅವರೆ ಬೀಜ ವಿತರಿಸಲಾಗಿತ್ತು. ಈ ವರ್ಷ 14,344 ಕ್ವಿಂಟಲ್ ಹೆಚ್ಚುವರಿಯಾಗಿ ವಿತರಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.