ADVERTISEMENT

ಬೀದರ್‌ | ವಿದ್ಯಾರ್ಥಿಗಳ ಮೇಲೆ ಹಲ್ಲೆ : ಶ್ರೀರಾಮ ಸೇನೆ, ಬಜರಂಗ ದಳ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 14:31 IST
Last Updated 30 ಮೇ 2024, 14:31 IST

ಬೀದರ್‌: ನಗರದ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿರುವ ಕ್ರಮ ತೀವ್ರ ಖಂಡನಾರ್ಹವಾದುದು ಎಂದು ಶ್ರೀರಾಮ ಸೇನೆ, ಬಜರಂಗ ದಳ ತಿಳಿಸಿವೆ.

‘ಜೈಶ್ರೀರಾಮ್‌’ ಹಾಡು ಹಚ್ಚಿರುವುದಕ್ಕೆ ಹಿಂದೂ ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಜಿಹಾದಿಗಳ ವಿರುದ್ಧ ಕ್ರಮ ಜರುಗಿಸಬೇಕು. ವಿದ್ಯಾಮಂದಿರದಲ್ಲಿ ಈ ರೀತಿಯ ಮತೀಯ ದಾಳಿ ನಡೆಸಿರುವುದು ನಾಗರೀಕ ಸಮಾಜ ಒಪ್ಪುವುದಿಲ್ಲ. ಜಿಲ್ಲಾ ಆಡಳಿತ ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಜಿಹಾದ್ ವಿದ್ಯಾರ್ಥಿಗಳ ಹಿನ್ನೆಲೆಯನ್ನು ಶೋಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆಯ ಮುಖಂಡ ಈಶ್ವರ ಸಿಂಗ್‌ ಠಾಕೂರ್‌ ಆಗ್ರಹಿಸಿದ್ದಾರೆ.

ಕಾಲೇಜಿನಲ್ಲಿ ಜೈಶ್ರೀರಾಮ್‌ ಹಾಡುಗಳನ್ನು ಹಾಕಬಾರದು ಎಂದಾದರೆ ನಮಾಜ್ ಕೂಡ ಮಾಡಬಾರದು. ಇದು ಹೀಗೆ ಮುಂದುವರೆದಲ್ಲಿ ಬಜರಂಗ ದಳದ ವತಿಯಿಂದ ಉಗ್ರ ಸ್ವರೂಪದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಸಂಯೋಜಕ ಭೀಮಣ್ಣಾ ಸೊರಳ್ಳಿ ಎಚ್ಚರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.