ADVERTISEMENT

ಸತತ 10ನೇ ಬಾರಿಗೆ ಪಟ್ಟದ್ದೇವರ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 16:22 IST
Last Updated 13 ಆಗಸ್ಟ್ 2020, 16:22 IST

ಕಮಲನಗರ: ಇಲ್ಲಿನ ಹಿರೇಮಠ ಸಂಸ್ಥಾನ ಸಂಚಾಲಿತ ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100 ಫಲಿತಾಂಶ ಬಂದಿದೆ. ಸತತವಾಗಿ 10ನೇ ಬಾರಿಗೆ ಪ್ರತಿಶತ ಫಲಿತಾಂಶ ತರುವ ಮೂಲಕ ಗಡಿಭಾಗದಲ್ಲಿ ಈ ಶಾಲೆ ದಾಖಲೆ ನಿರ್ಮಿಸಿದೆ ಎಂದು ಸಂಸ್ಥೆಯ ಆಡಳಿತ ಚನ್ನಬಸವ ಘಾಳೆ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ ಎಲ್ಲ 84 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 28 ಅಗ್ರಶ್ರೇಣಿ ಹಾಗೂ 56 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಐಶ್ವರ್ಯ ಸಂಜೀವಕುಮಾರ ನಿಟ್ಟೂರೆ 96.64 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಒಟ್ಟು 14 ವಿದ್ಯಾರ್ಥಿಗಳು ಶೇ 90ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದಿದ್ದಾರೆ.

ಅಕ್ಕಮಹಾದೇವಿ ರಾಚೋಟಯ್ಯ ಶೇ 95.3, ಸುಮಿತ್‌ ಸಂತೋಷ 94.24, ಕೀರ್ತಿ ಸಂತೋಷ 93.6, ಸ್ನೇಹಾ ಸುರೇಶಕುಮಾರ 93.60, ಆದಿತ್ಯ ಬಸವರಾಜ 92.64, ಸಾಧವಗೊಂಡ ಲಕ್ಷ್ಮಣ 92.32, ಹರ್ಷಿತಾ ಸುರೇಶ 91.68, ಶ್ವೇತಾ ರಾಜಕುಮಾರ 91.68, ಪ್ರೀತಿ ಸಂಜುಕುಮಾರ 91.52, ಭಕ್ತಿ ಬಾಲಾಜಿ 91.04, ಸ್ವಾತಿ ನಾಗನಾಥ 90.72, ಐಶ್ವರ್ಯ ವಿಜಯಕುಮಾರ ಶೇಗೆದಾರ 90.72, ಅಮಿತ ಪ್ರಕಾಶ 90.08 ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

ಶಾಲೆಯ ಸಾಧನೆಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಪೂಜ್ಯ ಮಹಾಲಿಂಗದೇವರು, ಆಡಳಿತಾಧಿಕಾರಿ ಚನ್ನಬಸವ ಘಾಳೆ, ಮುಖ್ಯಶಿಕ್ಷಕ ವಿಜಯಕುಮಾರ ಶೇಗೆದಾರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.