ADVERTISEMENT

ರಾಜ್ಯ ಮಟ್ಟದ ಕಲಾ ಸಂಭ್ರಮೋತ್ಸವ 31ಕ್ಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 15:13 IST
Last Updated 27 ಅಕ್ಟೋಬರ್ 2021, 15:13 IST
ರಾಣಿ ಸತ್ಯಮೂರ್ತಿ
ರಾಣಿ ಸತ್ಯಮೂರ್ತಿ   

ಬೀದರ್: ನಾಟ್ಯಶ್ರೀ ನೃತ್ಯಾಲಯದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅ.31ರಂದು ನಗರದ ಪೂಜ್ಯ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ರಾಜ್ಯ ಮಟ್ಟದ ಕಲಾ ಸಂಭ್ರಮೋತ್ಸವ ನಡೆಯಲಿದೆ.

ಬೆಳಿಗ್ಗೆ 10.30ರಿಂದ ಸಂಜೆಯ ವರೆಗೂ ಭರತ ನಾಟ್ಯ, ಕಥಕ್, ಜಾನಪದ ನೃತ್ಯ, ಯಕ್ಷಗಾನ, ಸಂಗೀತ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿವೆ ಎಂದು ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 10.30ಕ್ಕೆ ಸ್ವಾತಿ, ರಾಜೇಶ್ವರಿ, ಸ್ನೇಹಾ, ನಿಶ್ಚಿತಾ, ಭೂಮಿಕಾ, ಸೃಷ್ಟಿ, ನಿತ್ಯ, ಪೂರ್ವಿಕಾ, ಅನುಷ್ಕಾ, ಸಂಗಮೇಶ್ವರಿ, ವೈಷ್ಣವಿ, ಪದ್ಮಿನಿ ಚಿಂಚನಸೂರು ಅವರನ್ನೊಳಗೊಂಡ ಕಲಾ ತಂಡಗಳು ಭರತ ನಾಟ್ಯ ಹಾಗೂ ಪೌರಾಣಿಕ ನೃತ್ಯ ರೂಪಕ ಪ್ರದರ್ಶಿಸಲಿವೆ.

ADVERTISEMENT

ಮಧ್ಯಾಹ್ನ 2 ಗಂಟೆಗೆ ಶಿವಾನಿ ಸ್ವಾಮಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಪಂಡಿತ ಶಿವದಾಸ ಸ್ವಾಮಿ ಮೃದಂಗ ಬಾರಿಸಲಿದ್ದಾರೆ. ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಹಾಗೂ ತಂಡದವರು ಜಾನಪದ ಗೀತೆ, ಸಾರಿಗಮಪದ ಮಹೇಶಕುಮಾರ ಕುಂಬಾರ ಹಾಗೂ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ಸವಿಗಾನ ಮ್ಯುಜಿಕ್ ಅಕಾಡೆಮಿಯ ಭಾನುಪ್ರಿಯಾ ಅರಳಿ ನಿರ್ದೇಶನದಲ್ಲಿ ಶೈಲಜಾ ದಿವಾಕರ್, ಭಾಗ್ಯಲಕ್ಷ್ಮಿ ಮೂರ್ತಿ, ರಮ್ಯಾ ಜೋಷಿ, ದೀಪಾ ಕಿರಣ, ಪ್ರವೀಣಕುಮಾರ, ಯುಕ್ತಿ ಅರಳಿ, ಸೌಜನ್ಯ ಅತಿವಾಳೆ ಅವರಿಂದ ಸಂಗೀತ ಲಹರಿ ಜರುಗಲಿದೆ. ಮಧ್ಯಾಹ್ನ 3.10ಕ್ಕೆ ಕಲಬುರ್ಗಿ ಆಕಾಶವಾಣಿ ನಿರ್ದೇಶಕ ಸದಾನಂದ ಪೆರ್ಲ ಅವರು ಶಾಸ್ತ್ರೀಯ ನೃತ್ಯ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಉಪನ್ಯಾಸ ನೀಡುವರು.

3.40ಕ್ಕೆ ನಾಟ್ಯಶ್ರೀ ನೃತ್ಯಾಲಯದಿಂದ ಕೊಡುವ 2021ನೇ ಸಾಲಿನ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕೆ ಅಕ್ಕ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ದೀಪ ಬೆಳಗಿಸುವರು.

ಮುಖ್ಯ ಅತಿಥಿಗಳಾಗಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕೀತರ್ನಾ ಎಚ್.ಎಸ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಪಾಲ್ಗೊಳ್ಳುವರು. ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಂಗಳೂರಿನ ಶ್ವೇತಾ ಎಸ್, ಅನುಷಾ ಎನ್ ಹಾಗೂ ಬೀದರ್‌ನ ರಶ್ಮಿ ಆರ್ ತಂಡದವರಿಂದ ವೈವಿಧ್ಯಮಯ ಸಮೂಹ ನೃತ್ಯ, ನೃತ್ಯ ರೂಪಕ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮ ಜರುಗಲಿದೆ.

ಶಾಸ್ತ್ರೀಯ ನೃತ್ಯದಲ್ಲಿ ಪುಷ್ಪಾಂಜಲಿ, ಅಲರಿಪು, ಜತಿಸ್ವರ, ದೇವನಾಮ, ದೇಶಭಕ್ತಿ ಗೀತೆ, ಮಹಿಷಮರ್ದಿನಿ ನೃತ್ಯರೂಪಕ ಹಾಗೂ ಮಂಗಳಂ, ಜಾನಪದ ಶೈಲಿಯಲ್ಲಿ ದೇಶಭಕ್ತಿ ಗೀತೆ, ಕೋಲಾಟ, ವಚನ ನೃತ್ಯ, ಲಂಬಾಣಿ ನೃತ್ಯ, ಅಘೋರಿ ನೃತ್ಯ, ಯಕ್ಷಗಾನದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಸಾಹಿತಿ ಶಿವಕುಮಾರ ಕಟ್ಟೆ, ಭಾರತಿ ವಸ್ತ್ರದ, ರಾಮಚಂದ್ರ ಗಣಾಪೂರ, ಹೋಟೆಲ್‌ ಉದ್ಯಮಿ ಗುರುಮೂರ್ತಿ ಇದ್ದರು.

* * *
ಅನಂತ ಚಿಂಚನಸೂರಗೆ ನಾಟ್ಯಶ್ರೀ ಪ್ರಶಸ್ತಿ

ಬೀದರ್‌: ನಾಟ್ಯಶ್ರೀ ನೃತ್ಯಾಲಯದ ವತಿಯಿಂದ ಕೊಡುವ 2021ನೇ ಸಾಲಿನ ನಾಟ್ಯಶ್ರೀ ಪ್ರಶಸ್ತಿಗೆ ಕಲಬುರಗಿಯ ವರ್ಣಸಿಂಧು ನೃತ್ಯ ಕಲಾ ಕೇಂದ್ರದ ನಿರ್ದೇಶಕ ಅನಂತ ಕೆ. ಚಿಂಚನಸೂರ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹ 10 ಸಾವಿರ ನಗದು, ಪ್ರಶಸ್ತಿಫಲಕ ಹಾಗೂ ಶ್ರೀಫಲ ಒಳಗೊಂಡಿದೆ. ರಾಜ್ಯ ಮಟ್ಟದ ಕಲಾ ಸಂಭ್ರಮೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ ತಿಳಿಸಿದರು.
ಈವರೆಗೆ ವಿವಿಧ ಕಲೆ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐವರಿಗೆ ಪ್ರಶಸ್ತಿ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.