ADVERTISEMENT

ಭಾನುವಾರ ಮೈಲಾರ ಮಲ್ಲಣ್ಣ ದೇವಸ್ಥಾನ ಬಂದ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 14:48 IST
Last Updated 5 ಆಗಸ್ಟ್ 2021, 14:48 IST
ಮೈಲಾರ ಮಲ್ಲಣ್ಣ
ಮೈಲಾರ ಮಲ್ಲಣ್ಣ   

ಬೀದರ್: ಶ್ರಾವಣ ಅಮಾವಾಸ್ಯೆ ದಿನವಾದ ಭಾನುವಾರ (ಆ. 8) ಭಾಲ್ಕಿ ತಾಲ್ಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನ ಮುಚ್ಚಿರಲಿದೆ.

ಪವಿತ್ರ ಶ್ರಾವಣ ಅಮಾವಾಸ್ಯೆ ದಿನ ಪ್ರತಿ ವರ್ಷವೂ ದೇವಸ್ಥಾನಕ್ಕೆ ಜಿಲ್ಲೆ, ನೆರೆಯ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈ ಬಾರಿ ಕೋವಿಡ್ ಮೂರನೇ ಅಲೆಯ ಭೀತಿ ಇದೆ. ಹೀಗಾಗಿ ಸೋಂಕು ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಆಡಳಿತಾಧಿಕಾರಿಯಾದ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಡಾ. ಭುವನೇಶ ಪಾಟೀಲ ಅವರು ಅಮಾವಾಸ್ಯೆ ದಿನವಾದ ಭಾನುವಾರ ದೇವಸ್ಥಾನ ಮುಚ್ಚಿಡಲು ಆದೇಶಿಸಿದ್ದಾರೆ ಎಂದು ಮೈಲಾರ ಮಲ್ಲಣ್ಣ ದೇವಸ್ಥಾನದ ವ್ಯವಸ್ಥಾಪಕ ಸಂಜೀವಕುಮಾರ ಸುಂದಾಳಕರ್ ತಿಳಿಸಿದ್ದಾರೆ.

ಅಮಾವಾಸ್ಯೆ ದಿನ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಇವಕಾಶ ಇರುವುದಿಲ್ಲ. ಹೀಗಾಗಿ ಭಕ್ತರು ದೇವಸ್ಥಾನದ ಪರಿಸರಕ್ಕೆ ಬರಬಾರದು. ಕೋವಿಡ್ ಸೋಂಕು ತಡೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.