ADVERTISEMENT

ಬೀದರ್: ವೈದ್ಯರಿಗೆ ಸೂರ್ಯ ಫೌಂಡೇಷನ್ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 16:22 IST
Last Updated 24 ಅಕ್ಟೋಬರ್ 2021, 16:22 IST
ಕೋವಿಡ್ ಲಸಿಕಾಕರಣದಲ್ಲಿ ದೇಶ 100 ಕೋಟಿಗೂ ಅಧಿಕ ಡೋಸ್ ಸಾಧನೆಗೈದ ಪ್ರಯುಕ್ತ ಸೂರ್ಯ ಫೌಂಡೇಷನ್ ವತಿಯಿಂದ ಭಾಲ್ಕಿ ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು
ಕೋವಿಡ್ ಲಸಿಕಾಕರಣದಲ್ಲಿ ದೇಶ 100 ಕೋಟಿಗೂ ಅಧಿಕ ಡೋಸ್ ಸಾಧನೆಗೈದ ಪ್ರಯುಕ್ತ ಸೂರ್ಯ ಫೌಂಡೇಷನ್ ವತಿಯಿಂದ ಭಾಲ್ಕಿ ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು   

ಬೀದರ್: ಕೋವಿಡ್ ಲಸಿಕಾಕರಣದಲ್ಲಿ ದೇಶ ನೂರು ಕೋಟಿ ಡೋಸ್ ಸಾಧನೆ ಮಾಡಿದ ಪ್ರಯುಕ್ತ ಸೂರ್ಯ ಫೌಂಡೇಷನ್ ವತಿಯಿಂದ ಭಾಲ್ಕಿ ತಾಲ್ಲೂಕಿನ ಧನ್ನೂರ(ಎಚ್) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಡಾ. ದೇವಕಿ, ಡಾ. ಸ್ವಾಮಿ ವಿವೇಕಾನಂದ, ಸಿಬ್ಬಂದಿ ಮಂಗಲ, ಪ್ರದೀಪ್ ದೊಡ್ಡಮನೆ, ಅಭಿಲಾಷ ಕುಲಾಲ್, ಗ್ರಾಮ ಪಂಚಾಯಿತಿ ಸದಸ್ಯರಾದ ವಿದ್ಯಾಸಾಗರ, ಮೋಹನ್ ನಾಯ್ಕ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಫೌಂಡೇಷನ್ ತಾಲ್ಲೂಕು ಪ್ರಮುಖ ಸಿದ್ದು ಕಾಡೋದೆ ಅವರು, ಕೋವಿಡ್ ಲಸಿಕಾ ಅಭಿಯಾನದ ಕುರಿತು ಮಾತನಾಡಿದರು. ಪ್ರಮುಖರಾದ ಸತೀಶ ಪಾಟೀಲ, ಜೈಭೀಮ ಬೌದ್ಧೆ, ಫೌಂಡೇಷನ್ ಶಿಕ್ಷಕರಾದ ಸಂಗಮೇಶ ದಾನಿ, ಆಕಾಶ ಪಟ್ನೆ, ರಮೇಶ ಅರಾಳೆ, ಸಂಗಮೇಶ ಬಿರಾದಾರ, ಲೋಕೇಶ ದಾನಿ ಮೊದಲಾದವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.