ಹುಮನಾಬಾದ್: ಕೆರೆ ಹಳ್ಳಿಗಳಲ್ಲಿ ಈಜಾಡುವುದು ನಿಷೇಧಿಸಲಾಗಿದೆ ಎಂದು ಪೊಲೀಸರು ಕೆರೆಯ ದಡದಲ್ಲಿ ಶನಿವಾರ ಫಲಕ ಅಳವಡಿಸಲಾಗಿದೆ.
ಈ ಕುರಿತು ಪಿಎಸ್ಐ ತಿಮ್ಮಯ್ಯ ಮಾತನಾಡಿ, ‘ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳ ಕೆರೆಗಳಿಗೆ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಜಾಡುವುದು ನಿಷೇಧಿಸಲಾಗಿದೆ. ಕೆರೆಗಳ ಸುತ್ತ ತಮ್ಮ ಜಾನುವಾರುಗಳು ಹೋಗದಂತೆ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಸುರೇಶ್ ಸೇರಿದಂತೆ ಇತರರು ಇದ್ದರು.
ದಿನ ಪೂರ್ತಿ ಮಳೆ: ಹುಮನಾಬಾದ್ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳಿಖೇಡ್ ಬಿ., ದುಬಲಗುಂಡಿ, ಘೋಡವಾಡಿ, ಘಾಟಬೋರಾಳ್, ಹುಡಗಿ, ಮದರಗಾಂವ , ಮಾಣಿಕ್ ನಗರ ಗ್ರಾಮಗಳಲ್ಲಿ ದಿನ ಪೂರ್ತಿ ಮಳೆ ಸುರಿಯಿತು. ಶುಕ್ರವಾರ ರಾತ್ರಿಯಿಂದ ಆರಂಭವಾದ ಮಳೆ ಶನಿವಾರ ದಿನ ಪೂರ್ತಿ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.