ADVERTISEMENT

ವಿಷಯುಕ್ತ ತ್ಯಾಜ್ಯ: ತಹಶೀಲ್ದಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 11:25 IST
Last Updated 9 ಏಪ್ರಿಲ್ 2022, 11:25 IST
ಡಾ.ಪ್ರದೀಪಕುಮಾರ್ ಹಿರೇಮಠ
ಡಾ.ಪ್ರದೀಪಕುಮಾರ್ ಹಿರೇಮಠ   

ಹುಮನಾಬಾದ್: ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಕೆಲ ಕಂಪನಿಗಳು ವಿಷಯುಕ್ತ ತ್ಯಾಜ್ಯ ಹೊರ ಬಿಡುತ್ತಿರುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಡಾ.ಪ್ರದೀಪಕುಮಾರ್ ಹಿರೇಮಠ ಅವರು ಶುಕ್ರವಾರ ತಡರಾತ್ರಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು,‘ಎರಡು ಕಂಪನಿಗಳು ತ್ಯಾಜ್ಯ ಹೊರ ಬಿಡುತ್ತಿರುವುದು ಕಂಡುಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಈಚೆಗೆ ಮಾಣಿಕ್ ನಗರದ ಹಳ್ಳಕ್ಕೆ ತ್ಯಾಜ್ಯ ಹರಿಬಿಡಲಾಗಿತ್ತು. ನೀರು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಮಾಣಿಕ್ ನಗರ ಮತ್ತು ಗಡವಂತಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ತ್ಯಾಜ್ಯ ಹೊರಬಿಡುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.