ADVERTISEMENT

ಶಿಕ್ಷಕರ ನಿಯೋಜನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:42 IST
Last Updated 18 ಆಗಸ್ಟ್ 2022, 5:42 IST
ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಶಿಕ್ಷಕರನ್ನು ಬೇರೆಡೆ ನಿಯೋಜಿಸದಿರಲು ಆಗ್ರಹಿಸಿ ಗ್ರಾಮಸ್ಥರು ಮನವಿ ಸಲ್ಲಿಸಿದರು
ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾದ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಶಿಕ್ಷಕರನ್ನು ಬೇರೆಡೆ ನಿಯೋಜಿಸದಿರಲು ಆಗ್ರಹಿಸಿ ಗ್ರಾಮಸ್ಥರು ಮನವಿ ಸಲ್ಲಿಸಿದರು   

ಬಸವಕಲ್ಯಾಣ: ತಾಲ್ಲೂಕಿನ ಕಿಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಶಿಕ್ಷಕರನ್ನು ನಿಯೋಜನೆ ಮೇಲೆ ಬಿಡುಗಡೆಗೊಳಿಸದಿರಲು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಶಾಲೆಯ ಮುಖ್ಯಶಿಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಒಬ್ಬರು ಈಚೆಗೆ ವರ್ಗಾವಣೆಗೊಂಡಿದ್ದಾರೆ. ಇನ್ನುಳಿದ 7 ಶಿಕ್ಷಕರಲ್ಲಿ ನಾಲ್ವರು ಮಾತ್ರ ಬೋಧಕರಿದ್ದಾರೆ. ಅವರಲ್ಲಿಯೂ ಇಬ್ಬರನ್ನು ಬೇರೆಡೆ ನಿಯೋಜನೆಗೊಳಿಸಲು ಆದೇಶ ನೀಡಲಾಗಿದೆ. ಹೀಗಾಗಿ ಒಟ್ಟು 163 ವಿದ್ಯಾರ್ಥಿಗಳಿದ್ದು ತೊಂದರೆ ಆಗಲಿದೆ. ಒಂದು ವೇಳೆ ಯಾರನ್ನಾದರೂ ಇಲ್ಲಿಂದ ಬಿಡುಗಡೆಗೊಳಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಅಖಿಲ ಭಾರತ ಸಮತಾ ಸೈನಿಕ ದಳದ ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಫುಲೆ, ಹಿರಿಯರಾದ ವೀರಾರೆಡ್ಡಿ, ಶಂಕರ ಫುಲೆ, ಶಿವರಾಜ ಗೌಂಡಿ, ಸಂಜೀವರೆಡ್ಡಿ, ಮಹೇಬೂಬ್, ಕೃಷ್ಣಾ, ರೇವಣಪ್ಪ, ಯುನೂಸ್ ಪಟೇಲ್, ತುಕಾರಾಮ ಖರ್ಗೆ, ಮನೋಜ ಗಾಯಕವಾಡ, ಕಾಶಣ್ಣ ಸಾಧು, ನಾಗರಾಜ ವಾಘಮಾರೆ, ಗುಂಡಪ್ಪ ಕೋಳಿ ಹಾಗೂ ಅಮರ ಪಂಚಾಳ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.