ADVERTISEMENT

ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಗೆಳೆಯರ ಬಳಗದ ಅಧ್ಯಕ್ಷ ಅಸ್ಲಾಂ ಮಿಯ್ಯಾ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 11:05 IST
Last Updated 26 ನವೆಂಬರ್ 2021, 11:05 IST
ಚಿಟಗುಪ್ಪ ಪಟ್ಟಣದಲ್ಲಿ ಗೆಳೆಯರ ಬಳಗ ಆಯೋಜಿಸಿದ್ದ ‘ಆದರ್ಶ ಸಮಾಜ ನಿರ್ಮಾಣದಲ್ಲಿ ಶಿಕ್ಷಣ’ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಸಂಜೀವನ ಭೊಸ್ಲೆ ಅವರನ್ನು ಸನ್ಮಾನಿಸಲಾಯಿತು. ಅಸ್ಲಾಂ ಮಿಯ್ಯಾ, ವಿನಯ್‌, ಚಂದ್ರಕಾಂತಯ್ಯ ಹಾಗೂ ಇತರರು ಇದ್ದರು
ಚಿಟಗುಪ್ಪ ಪಟ್ಟಣದಲ್ಲಿ ಗೆಳೆಯರ ಬಳಗ ಆಯೋಜಿಸಿದ್ದ ‘ಆದರ್ಶ ಸಮಾಜ ನಿರ್ಮಾಣದಲ್ಲಿ ಶಿಕ್ಷಣ’ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಸಂಜೀವನ ಭೊಸ್ಲೆ ಅವರನ್ನು ಸನ್ಮಾನಿಸಲಾಯಿತು. ಅಸ್ಲಾಂ ಮಿಯ್ಯಾ, ವಿನಯ್‌, ಚಂದ್ರಕಾಂತಯ್ಯ ಹಾಗೂ ಇತರರು ಇದ್ದರು   

ಚಿಟಗುಪ್ಪ: ‘ಆದರ್ಶ ಸಮಾಜ ನಿಮಾರ್ಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ’ ಎಂದು ಗೆಳೆಯರ ಬಳಗದ ಅಧ್ಯಕ್ಷ ಅಸ್ಲಾಂ ಮಿಯ್ಯಾ ಅಭಿಪ್ರಾಯಪಟ್ಟರು.

ಇಲ್ಲಿಯ ಗೆಳೆಯರ ಬಳಗ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಂದು ತಾರತಮ್ಯ ಮಾಡದೇ ಸರ್ಕಾರ ಎಲ್ಲ ಶಾಲೆಗಳಲ್ಲಿ ಶಿಕ್ಷಕರಿಗೆ, ಮಕ್ಕಳಿಗೆ ಸಮಾನ ಸ್ಥಾನ ನೀಡಬೇಕು. ಗೌರವಿಸಬೇಕು. ಕನಿಷ್ಠ ಅನುದಾನ ರಹಿತ ಶಾಲೆ ಮಕ್ಕಳಿಗೆ ಬಿಸಿ ಊಟವನ್ನಾದರೂ ಕೊಡಬೇಕು. ಮಕ್ಕಳು ಮುಂದಿನ ಪ್ರಜೆಗಳು. ಅವರ ಆರೋಗ್ಯ ಸಂರಕ್ಷಣೆ ಸರ್ಕಾರದ ಹೊಣೆ’ ಎಂದರು.

ADVERTISEMENT

ಕೊವೀಡ್‌ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಬೋಧನೆ ಮಾಡಿದ ಶಿಕ್ಷಕ ಸಂಜೀವನ ಭೋಸ್ಲೆ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ರಾವ್‌ಸಾಬ್‌ ಭಜಂತ್ರಿ, ಶಾಮರಾವ್‌ ಹಡಪದ, ಶಿಕ್ಷಕರಾದ ಶರಣು, ನರಸಿಂಗ್‌, ಜೀವವಿಮಾ ಅಭಿವೃದ್ಧಿ ಅಧಿಕಾರಿ ವಿನಯ ಹಾಗೂ ಗಣ್ಯರಾದ ಪ್ರಭುಲಿಂಗ ಪಾಟೀಲ ಇದ್ದರು.

ಚಂದ್ರಕಾಂತ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.