ADVERTISEMENT

ನುಡಿ, ನಡೆಗೆ ಪ್ರಾಮುಖ್ಯ ನೀಡಿದ ಬಸವಣ್ಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 12:08 IST
Last Updated 4 ನವೆಂಬರ್ 2021, 12:08 IST
ಬೀದರ್ ತಾಲ್ಲೂಕಿನ ರಾಜಗೀರಾದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಗೂ ಗುರುವಚನ ಪ್ರವಚನ ಅಭಿಯಾನದಲ್ಲಿ ಲಿಂಗಾಯತ ಮಹಾಮಠದ ಪ್ರಭುದೇವರು ಮಾತನಾಡಿದರು. ಶಾಮರಾವ್ ಕುಲಕರ್ಣಿ, ಲೋಕೇಶ ವರವಟ್ಟಿ, ಅಜಗಣ್ಣ, ಹಣಮಂತರಾವ್ ಪೊಲೀಸ್ ಪಾಟೀಲ ಉಪಸ್ಥಿತರಿದ್ದರು
ಬೀದರ್ ತಾಲ್ಲೂಕಿನ ರಾಜಗೀರಾದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಗೂ ಗುರುವಚನ ಪ್ರವಚನ ಅಭಿಯಾನದಲ್ಲಿ ಲಿಂಗಾಯತ ಮಹಾಮಠದ ಪ್ರಭುದೇವರು ಮಾತನಾಡಿದರು. ಶಾಮರಾವ್ ಕುಲಕರ್ಣಿ, ಲೋಕೇಶ ವರವಟ್ಟಿ, ಅಜಗಣ್ಣ, ಹಣಮಂತರಾವ್ ಪೊಲೀಸ್ ಪಾಟೀಲ ಉಪಸ್ಥಿತರಿದ್ದರು   

ಜನವಾಡ: ಬಸವಣ್ಣನವರು ನುಡಿ, ನಡೆಗೆ ಪ್ರಾಮುಖ್ಯ ನೀಡಿದ್ದರು ಎಂದು ಲಿಂಗಾಯತ ಮಹಾಮಠದ ಪ್ರಭುದೇವರು ನುಡಿದರು.

ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಬೀದರ್ ತಾಲ್ಲೂಕಿನ ರಾಜಗೀರಾದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಂಭ್ರಮ ಮತ್ತು ಗುರುವಚನ ಪ್ರವಚನ ಅಭಿಯಾನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನದೊಳಗೊಂದು, ಮಾತಿನಲ್ಲಿ ಮತ್ತೊಂದು, ಕ್ರಿಯೆಯಲ್ಲಿ ಇನ್ನೊಂದು ಆದರೆ ದೇವರು ಮೆಚ್ಚಲಾರ ಎಂದು ಅವರು ಹೇಳಿದ್ದರು ಎಂದು ತಿಳಿಸಿದರು.

ADVERTISEMENT

ನುಡಿದ ನುಡಿಯನ್ನು ಪೂರೈಸುವುದು ಪ್ರಾಣಕ್ಕಿಂತ ಪ್ರಿಯವಾಗಬೇಕು ಎಂದು ಹೇಳಿದರು.

ಶಾಮರಾವ್ ಕುಲಕರ್ಣಿ ಉದ್ಘಾಟಿಸಿದರು. ಲೋಕೇಶ ವರವಟ್ಟಿ ಮಾತನಾಡಿದರು. ಹಣಮಂತರಾವ್ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಜಗಣ್ಣ ದೇವರು ಸಮ್ಮುಖ ವಹಿಸಿದ್ದರು. ನಾಗಶೆಟ್ಟಿ ಇಪ್ಪಳ್ಳಿ ಇದ್ದರು. ಆಕಾಶ ರೆಡ್ಡಿ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.