ಬೀದರ್: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಜಿಲ್ಲೆಯ ಮಠಾಧೀಶರು ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಮಠಾಧೀಶರು, ಇಡೀ ವೀರಶೈವ ಲಿಂಗಾಯತ ಸಮುದಾಯ ತಮ್ಮೊಂದಿಗೆ ಇದೆ ಎಂದು ಅಭಯ ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಮತ್ತೆ ಇತಿಹಾಸ ಪುನರಾವರ್ತನೆ ಆಗಲಿದೆ. ಯಡಿಯೂರಪ್ಪ ಅವರನ್ನು ಬದಲಿಸಲು ಹೋದವರು ನಿರ್ನಾಮ ಆಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಘನಲಿಂಗ ರಾಜೇಶ್ವರ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯ ಡೊಣಗಾಂವ, ಚಿದಾನಂದ ಶಿವಾಚಾರ್ಯ ಜೊನ್ನಿಕೇರಿ, ಚನ್ನಮಲ್ಲೇಶ್ವರ ಸ್ವಾಮೀಜಿ ಹುಡಗಿ, ಜಯಶಾಂತಲಿಂಗ ಸ್ವಾಮೀಜಿ ಹಿರೆನಾಗಾಂವ, ಪಂಡಿತಾರಾಧ್ಯ ಶಿವಾಚಾರ್ಯ ಹಳ್ಳಿಖೇಡ(ಬಿ) ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.