ADVERTISEMENT

ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 15:39 IST
Last Updated 22 ಅಕ್ಟೋಬರ್ 2020, 15:39 IST

ಬೀದರ್: ಹುಮನಾಬಾದ್ ಪಟ್ಟಣದ ಮನೋಹರ ಪೂಜಾರಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಹುಮನಾಬಾದ್‍ನಲ್ಲಿ ಗುರುವಾರ ಬಂಧಿಸಿದ್ದಾರೆ.

ವಾಂಜರಿಯ ಶರಣಪ್ಪ ಪೊತೆನೋರ್ ಬಂಧಿತ ಆರೋಪಿ. ಬಂಧಿತನಿಂದ 101 ಗ್ರಾಂ ಚಿನ್ನ, ₹ 30 ಸಾವಿರ ನಗದು ಸೇರಿ ₹4.78 ಲಕ್ಷದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹುಮನಾಬಾದ್ ವೃತ್ತದ ಸಿಪಿಐ ಮಲ್ಲಿಕಾರ್ಜುನ ಎಂ. ಯಾತನೂರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‍ಐಗಳಾದ ರವಿಕುಮಾರ, ಕಿರಣ, ಸಿಬ್ಬಂದಿ ಮಲ್ಲಪ್ಪ, ನವೀನ್, ನಸೀದ್, ಸಿದ್ರಾಮ, ರಮೇಶ, ವಸಂತರಾವ್, ದುಂಡಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.