ADVERTISEMENT

ಬಸವಕಲ್ಯಾಣ: ಮೂರು ಹಾವುಗಳ ಪ್ರತ್ಯಕ್ಷ- ಆತಂಕ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 2:58 IST
Last Updated 8 ಜೂನ್ 2021, 2:58 IST
ಬಸವಕಲ್ಯಾಣ ತಾಲ್ಲೂಕಿನ ಶಿವಪುರದ ಮಲ್ಲಪ್ಪ‌ ಕೋಟೆ ನಿವಾಸದಲ್ಲಿ ಕಾಣಿಸಿದ ಮೂರು ಹಾವುಗಳನ್ನು ಗನಿಸಾಹೇಬ್ ತಡೋಳಾ‌ ಹಿಡಿದರು
ಬಸವಕಲ್ಯಾಣ ತಾಲ್ಲೂಕಿನ ಶಿವಪುರದ ಮಲ್ಲಪ್ಪ‌ ಕೋಟೆ ನಿವಾಸದಲ್ಲಿ ಕಾಣಿಸಿದ ಮೂರು ಹಾವುಗಳನ್ನು ಗನಿಸಾಹೇಬ್ ತಡೋಳಾ‌ ಹಿಡಿದರು   

ಬಸವಕಲ್ಯಾಣ: ತಾಲ್ಲೂಕಿನ ಶಿವಪುರದ ಮಲ್ಲಪ್ಪ ಕೋಟೆ ಎನ್ನುವವರ ಮನೆಯ ಪಕ್ಕದಲ್ಲಿ ಭಾನುವಾರ ಸಂಜೆ ಒಮ್ಮೇಲೆ ಮೂರು‌ ಹಾವುಗಳು ಪ್ರತ್ಯಕ್ಷವಾಗಿ‌ ಆತಂಕ‌ ಸೃಷ್ಟಿಸಿದ್ದವು.

ಈ ವಿಷಯ ಉಪ‌ ಅರಣ್ಯ ಅಧಿಕಾರಿ ನಿಸಾರ ಮಣಿಯಾರಗೆ ತಿಳಿಸಿದಾಗ‌ ಅವರು ತಕ್ಷಣ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದರು. ಉರಗ ತಜ್ಞ ಗನಿಸಾಹೇಬ್ ತಡೋಳಾ ಅವರನ್ನು ‌ಸ್ಥಳಕ್ಕೆ ಕರೆಸಿಕೊಂಡು ಹಾವುಗಳನ್ನು‌ ಹಿಡಿದು ಅರಣ್ಯಕ್ಕೆ‌ ಸಾಗಿಸಿದ್ದಾರೆ.

‘ಹಾವುಗಳು ‌ವಿಷಕಾರಿ‌ ಆಗಿರಲಿಲ್ಲ. ಸಮೀಪದ ನಾರಾಯಣಪುರ ಕೆರೆಯಿಂದ‌ ಬಂದಿರುವ ಸಾಧ್ಯತೆ ಇದೆ’ ಎಂದು‌ ಅರಣ್ಯ ಅಧಿಕಾರಿ‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.