ADVERTISEMENT

ಔರಾದ್: ಭಕ್ತರ ಮನ ಗೆದ್ದ ಪುಟ್ಟ ಬಾಲಕನ ಗಣೇಶ ಶ್ಲೋಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 12:35 IST
Last Updated 4 ಸೆಪ್ಟೆಂಬರ್ 2022, 12:35 IST
ಸನ್ಶ್ರಯ 
ಸನ್ಶ್ರಯ    

ಔರಾದ್: ಗಣೇಶ ಚತುರ್ಥಿ ವೇಳೆ ಪುಟ್ಟ ಬಾಲಕನೊಬ್ಬ ಹೇಳಿದ ಗಣೇಶ ಶ್ಲೋಕ ಭಕ್ತರ ಮನ ಸೆಳೆದಿದೆ.

ತಾಲ್ಲೂಕಿನ ತೇಗಂಪುರ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅದೇ ಊರಿನ ಶಿವಕುಮಾರ ಮುಕ್ತೆದಾರ ಹಾಗೂ ನಂದಿನಿ ಮುಕ್ತೆದಾರ ದಂಪತಿಯ ಮೂರು ವರ್ಷದ ಪುತ್ರ ಸನ್ಶ್ರಯ ‘ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ’ ಎನ್ನುವ ಗಣೇಶನ ಶ್ಲೋಕ ಪಟ ಪಟಪನೇ ಹೇಳುವ ಮೂಲಕ ಸೇರಿದ ಭಕ್ತರಲ್ಲಿ ಅಚ್ಚರಿಯನ್ನುಂಟು ಮಾಡಿದ.

ಅದೇ ರೀತಿ ‘ತಂದೆ ನೀನು ತಾಯಿ ನೀನು’, ‘ಹೆಣ್ಣು ಹೆಣ್ಣಲ್ಲ’, ‘ಇಳೆ ನಿಮ್ಮ ದಾನ’ ಮತ್ತಿತರೆ ಶರಣರ ವಚನಗಳನ್ನು ಹೇಳಿದ. ಕೊನೆಯಲ್ಲಿ ಗಾಯತ್ರಿ ಮಂತ್ರ 'ಓಂ ಭೂರ್ಭುವಃ ಸ್ವಃ' ಮತ್ತು 'ಗುರು ಬ್ರಹ್ಮ ಗುರು ವಿಷ್ಣು' ಶ್ಲೋಕ ಹೇಳಿ ಭಕ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡ. ಈ ಬಾಲಕನ ಗಣೇಶ ಶ್ಲೋಕ ಈಗ ಮೊಬೈಲ್‍ನಲ್ಲಿ ಹರಿದಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.