ರೈಲು
– ಪ್ರಜಾವಾಣಿ ಚಿತ್ರ
ಭಾಲ್ಕಿ: ರೈಲು ಸಂಖ್ಯೆ 17621/17622 ತಿರುಪತಿ–ಔರಂಗಬಾದ್ ಎಕ್ಸ್‌ಪ್ರೆಸ್ ರೈಲು ಭಾಲ್ಕಿ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.
ರೈಲು ನಿಲುಗಡೆಯಿಂದ ಭಾಲ್ಕಿ ಪಟ್ಟಣ ಹಾಗೂ ಸುತ್ತಮುತ್ತಲ ಭಾಗದ ಭಕ್ತರಿಗೆ ತಿರುಪತಿ ಯಾತ್ರೆ ಕೈಗೊಳ್ಳಲು ಅನುಕೂಲ ಆಗಲಿದೆ.
ಈ ನಿಲುಗಡೆ ಪ್ರಾರಂಭಿಕ ಹಂತದಲ್ಲಿ ತಾತ್ಕಾಲಿಕವಾಗಿದ್ದು, ಭಾಲ್ಕಿಯಿಂದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದರೆ ಮಾತ್ರ ಇದನ್ನು ಮುಂದುವರಿಸಲು ಅವಕಾಶವಿದೆ. ಹಾಗಾಗಿ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.