ADVERTISEMENT

ಭಾಲ್ಕಿ; ಅಪರಿಚಿತ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:50 IST
Last Updated 1 ಡಿಸೆಂಬರ್ 2021, 4:50 IST

ಭಾಲ್ಕಿ: ಬಸ್ ನಿಲ್ದಾಣದಲ್ಲಿ ಸುಮಾರು 65 ವಯಸ್ಸಿನ ವ್ಯಕ್ತಿಯ ಶವ ಮಂಗಳವಾರ ಮುಂಜಾನೆ ಪತ್ತೆಯಾಗಿದೆ.

ಮೃತ ವ್ಯಕ್ತಿಯ ವಾರಸುದಾರ ಯಾರು ಇಲ್ಲ ಎಂಬುದು ತಿಳಿದು ಬಂದಿದೆ. ಮೃತ ವ್ಯಕ್ತಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಎತ್ತರ 5.4, ಉದ್ದ ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆ ಮೇಲೆ ಕಪ್ಪು-ಬಿಳಿ ಕೂದಲು, ಕಪ್ಪು, ಬಿಳಿ ಬಣ್ಣದ ಗಡ್ಡ ಇದೆ. ಮೃತ ವ್ಯಕ್ತಿ ಗುಲಾಬಿ ಬಣ್ಣದ ರೂಮಾಲು, ಚಾಕಲೇಟ್ ಬಣ್ಣದ ಅಂಗಿ, ಬಿಳಿ ಧೋತಿ ಧರಿಸಿರುತ್ತಾನೆ. ಮೃತನ ಶವ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಕುರಿತು ಭಾಲ್ಕಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮಾಹಿತಿಗಾಗಿ ಮೊ: 9480803463ಗೆ ಸಂಪರ್ಕಿ ಸಲು ನಗರ ಪೋಲಿಸ್ ಠಾಣೆಯ ಸಿಪಿಐ ರಾಘವೇಂದ್ರ ಔರಾದಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.