ADVERTISEMENT

ನಂಬಿದವರನ್ನು ಹೊಳೆ ದಾಟಿಸುವ ಅಂಬಿಗರು: ಸಾಹಿತಿ ಮಾಣಿಕ

ಮಹರ್ಷಿ ವಾಲ್ಮೀಕಿ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:19 IST
Last Updated 13 ಅಕ್ಟೋಬರ್ 2025, 5:19 IST
ಹುಲಸೂರ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ನಡೆಯಿತು
ಹುಲಸೂರ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ನಡೆಯಿತು   

ಹುಲಸೂರ: ‘ನಂಬಿದವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೊಳೆ ದಾಟಿಸುವ ಜನರು ನಮ್ಮ ಅಂಬಿಗರು. ನಮ್ಮ ಜನರ ಆರಾಧ್ಯ ದೈವ ವಾಲ್ಮೀಕಿ ಮಹರ್ಷಿಯನ್ನು ಕಳ್ಳ ಎಂದು ಬಿಂಬಿಸುವ ಕೆಲಸವನ್ನು ಬ್ರಾಹ್ಮಣರು ಮಾಡಿದ್ದಾರೆ’ ಎಂದು ಸಾಹಿತಿ ಮಾಣಿಕ ನೇಳಗಿ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಟೋಕರಿ ಕೋಳಿ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದರು. ಇದರಲ್ಲಿ 24‌ ಸಾವಿರ ಶ್ಲೋಕಗಳು, 4 ಲಕ್ಷ ಶಬ್ಧಗಳು, 7 ಕಾಂಡಗಳಿವೆ. ನಮ್ಮ ಸಮುದಾಯದ ಜನ ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ಶಿಕ್ಷಣ ಪಡೆಯಬೇಕು. ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂಥ ಜೀವನ ಶೈಲಿ ಅಳವಡಿಸಿಕೊಂಡು ಬದುಕಬೇಕು’ ಎಂದು ತಿಳಿಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಮಾತನಾಡಿ,‘ರಾಮಾಯಣ ಬರೆದ ಮಹಾನ್ ಕವಿ ವಾಲ್ಮೀಕಿ ಮಹರ್ಷಿಯವರು ಪರಿವರ್ತನೆಗೊಂಡಂತೆ ನೀವೂ ಬದಲಾಗಬೇಕು’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯ ಸಿಂಗ್ ಮಾತನಾಡಿ,‘ಮಹಾಪುರುಷರ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗ ಬಾರದು’ ಎಂದು ಹೇಳಿದರು.

ಸಮರ್ಥ ಸದ್ಗುರು ಗುರು ರತ್ನಕಾಂತ ಶಿವಯೋಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ತಾ.ಪಂ ಮಾಜಿ ಸದಸ್ಯ ಗೋವಿಂದರಾವ ಸೋಮವಂಶಿ, ಜಿ.ಪಂ ಮಾಜಿ ಸದಸ್ಯ ಸುಧೀರ ಕಾಡಾದಿ ಮಾತನಾಡಿದರು.

ಟೋಕರಿ ಕೋಳಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಟೋಕರಿ ಕೋಳಿ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಬಳಕಟ್ಟೆ, ಸಾವಿತ್ರಿ ಸಲಗಾರ, ಶರಣು ಅಲಗೂಡ, ದಾವೂದ್, ಓಂಕಾರ ಪಟ್ನೆ, ಪ್ರವೀಣ ಕಾಡಾದಿ, ಮನ್ಸೂರ್ ದಾವಲಜಿ, ಯಾಸ್ಮಿನ್ ಗಫಾರ ಪಟೇಲ್, ಸಿದ್ರಾಮ ಕಾಮಣ್ಣ, ಗ್ರಾ.ಪಂ ಅಧ್ಯಕ್ಷೆ ದೀಪಾ ರಾಣಿ ಧರ್ಮೇಂದ್ರ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ರಣಜೀತ್ ಗಾಯಕವಾಡ,‌ ಮಲ್ಲಪ್ಪ ಧಬಾಲೆ, ಲತಾ ಹಾರಕುಡೆ, ಸುಧೀರ ಕಾಡಾದಿ, ಗೋವಿಂದರಾವ ಸೋಮವಂಶಿ, ಚಂದ್ರಕಾಂತ ದೆಟ್ನೆ, ಅರವೀಂದ ಹರಿಪಲ್ಲೆ, ಸಂತೋಷ ಗುತ್ತೇದಾರ, ನಿಲಕಂಠ ರಾಠೋಡ, ಗುಲಾಮ್ ಬಡಾಯಿ, ಅಬ್ರಾರ ಸೌದಾಗರ, ಟೋಕರಿ ಕೋಳಿ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.