ಜನವಾಡ: ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರವು ‘ಕೆವಿಕೆ ಕೃಷಿ ಪಾಠಶಾಲೆ’ ಸರಣಿಯಲ್ಲಿ ಶನಿವಾರ (ಜೂ.12) ಬೆಳಿಗ್ಗೆ 11ಕ್ಕೆ ಮುಂಗಾರು ಬೆಳೆಗಳಲ್ಲಿ ಕಳೆಗಳ ಹತೋಟಿ ಕುರಿತು ರೈತರಿಗೆ ಆನ್‍ಲೈನ್‍ನಲ್ಲಿ ತರಬೇತಿ ನೀಡಲಿದೆ.
ಕಳೆಗಳು, ಕಳೆಗಳ ವರ್ಗೀಕರಣ, ಏಕದಳ, ದ್ವಿದಳ ಜಾತಿಯ ಕಳೆಗಳು, ಅವುಗಳ ಬಾಧೆ ಪ್ರಮಾಣ, ಪಾರಂಪರಿಕ, ರಾಸಾಯನಿಕ ಹತೋಟಿ ಕ್ರಮಗಳ ಕುರಿತು ವಿಜಯಪುರ ಜಿಲ್ಲೆಯ ಇಂಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜೀವಕುಮಾರ ಬಿ. ನೆಗಳೂರು ಮಾಹಿತಿ ನೀಡಲಿದ್ದಾರೆ.
ಜಿಲ್ಲೆಯ ರೈತರು ಗೂಲ್ ಮೀಟ್ ಲಿಂಕ್ meet.google.com/ngx-xdwd-noh ಬಳಸಿ ತರಬೇತಿಯಲ್ಲಿ ಪಾಲ್ಗೊಳ್ಳಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.