ADVERTISEMENT

ಯಕ್ಷಗಾನ ಮಾದರಿಯಲ್ಲಿ ಜಾನಪದ ಕಲೆ ಉಳಿಯಲಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 12:53 IST
Last Updated 7 ಡಿಸೆಂಬರ್ 2022, 12:53 IST
ಔರಾದ್ ತಾಲ್ಲೂಕಿನ ಬಲ್ಲೂರ ಗ್ರಾಮದಲ್ಲಿ ನಡೆದ ಸಾಹಿತ್ಯ ಉತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಗಣ್ಯರನ್ನು ಸನ್ಮಾನಿಸಲಾಯಿತು
ಔರಾದ್ ತಾಲ್ಲೂಕಿನ ಬಲ್ಲೂರ ಗ್ರಾಮದಲ್ಲಿ ನಡೆದ ಸಾಹಿತ್ಯ ಉತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಗಣ್ಯರನ್ನು ಸನ್ಮಾನಿಸಲಾಯಿತು   

ಔರಾದ್: ‘ಕರಾವಳಿ ಪ್ರದೇಶದ ಯಕ್ಷಗಾನ ಮಾದರಿಯಲ್ಲಿ ಈ ಭಾಗದ ಜಾನಪದ ಹಾಗೂ ಬಯಲಾಟ ಕಲೆಯನ್ನು ಉಳಿಸಬೇಕಾಗಿದೆ’ ಎಂದು ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಹೇಳಿದರು.

ತಾಲ್ಲೂಕಿನ ಬಲ್ಲೂರ ಗ್ರಾಮದಲ್ಲಿ ಈಚೆಗೆ ಶರಣ ಮಲ್ಲಶೆಟ್ಟೆಪ್ಪ ಉದಗಿರೆ ಅವರ ಸ್ಮರಣೋತ್ಸವದ ಅಂಗವಾಗಿ ನಡೆದ ಸಾಹಿತ್ಯ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಶರಣ ಸಂಪ್ರದಾಯದ ಮಲ್ಲಶೆಟ್ಟಿ ಅವರ ಸ್ಮರಣೆಯ ಮೂಲಕ ಸ್ಥಳೀಯ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಕ್ರಿಯಾಶೀಲ ಚಟುವಟಿಕೆಗಳ ಪ್ರತೀಕವೇ ಈ ಕಾರ್ಯಕ್ರಮವಾಗಿದೆ. ಈ ಮೂಲಕ ಗ್ರಾಮೀಣ ಸಂಸ್ಕೃತಿಯ ಸೊಗಡು ಉಳಿಯುವಂತಾಗಲಿ’ ಎಂದರು.

ADVERTISEMENT

ಸಕಲೇಶ್ವರಿ ಚನಶೆಟ್ಟಿ ಹಾಗೂ ಪಾರ್ವತಿ ಸೊನಾರೆ ಮಾತನಾಡಿ,‘ಆಧುನಿಕ ಜೀವನ ಶೈಲಿಯಿಂದ ನೆಲಮೂಲ ಸಂಸ್ಕೃತಿ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ದೇಶಿ ಕಲೆ, ಸಂಸ್ಕೃತಿ ಎಲ್ಲಾದರೂ ಉಳಿದರೆ ಅದು ಬಲ್ಲೂರಿನಿಂಥ ಹಳ್ಳಿಗಳಲ್ಲಿ ಉಳಿದಿದೆ. ಅದಕ್ಕೆ ಕಾರಣ ಈ ನೆಲದಲ್ಲಿ ಶರಣರ ಪ್ರಭಾವ’ ಎಂದು ಹೇಳಿದರು.

ಕಾರ್ಯಕ್ರವದಲ್ಲಿ ಶರಣ ಸಿದ್ದಯ್ಯ ಸ್ವಾಮೀಜಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ, ಬೀದರ್ ಪ.ಪೂ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಡಾ.ಮನ್ಮಥ ಡೋಳೆ ಅವರನ್ನು ಸನ್ಮಾನಿಸಲಾಯಿತು.

ಶಿವಕುಮಾರ ತರನಾಳೆ ಅಧ್ಯಕ್ಷತೆ ವಹಿಸಿದರು. ಹಿರಿಯ ಮುಖಂಡ ಕಲ್ಯಾಣರಾವ ಸಂಗಾ ಪಾಟೀಲ, ವೀರಪ್ಪ ಅಪ್ಪಾಸಾಹೇಬ ಡಿಗ್ಗೆ, ಶಿವರಾಜ ಪಾಟೀಲ, ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ದೇವೇಂದ್ರ ಕರಂಜೆ, ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಉಪನ್ಯಾಸಕ ಡಾ. ಈಶ್ವರಯ್ಯ ಕೊಡಂಬಲ, ಡಾ. ಬಂಡಯ್ಯ ಸ್ವಾಮಿ, ಡಾ. ರಾಮಚಂದ್ರ ಗಣಾಪೂರ, ಡಾ. ವೀರೇಶ ರಾಮಪುರೆ ಇದ್ದರು.

ಡಾ.ಬಸವರಾಜ ಬಲ್ಲೂರ ಸ್ವಾಗತಿಸಿದರು. ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಟಿ.ಎಂ.ಮಚ್ಚೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.