ADVERTISEMENT

ಅಂತರಕಾಲೇಜು ಕ್ರೀಡಾಕೂಟ ನಾಳೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 6:36 IST
Last Updated 6 ಮಾರ್ಚ್ 2014, 6:36 IST

ಮೈಸೂರು: ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಆಶ್ರಯದಲ್ಲಿ ಮಾರ್ಚ್ 7ರಿಂದ 9ರವರೆಗೆ ಮೈಸೂರು ವಿಶ್ವವಿದ್ಯಾಲಯದ ಅಂತರಕಾಲೇಜು ಪುರುಷರ ಕ್ರೀಡಾಕೂಟ ನಡೆಯಲಿದೆ.

ಮೈಸೂರು ವಿವಿಯ ಐದು ವಲಯಗಳಾದ ಚಾಮುಂಡಿ (ಮೈಸೂರು ನಗರ), ಕೃಷ್ಣರಾಜ (ಮೈಸೂರು ಗ್ರಾಮಾಂತರ), ಚಾಮರಾಜ (ಚಾಮರಾಜನಗರ ಜಿಲ್ಲೆ), ಮಾಂಡವ್ಯ (ಮಂಡ್ಯ ಜಿಲ್ಲೆ) ಮತ್ತು ಮಲೆನಾಡು (ಹಾಸನ ಜಿಲ್ಲೆ) ಕಾಲೇಜುಗಳ ಆಟಗಾರರು ಭಾಗವಹಿಸುವರು.

50 ಕಾಲೇಜುಗಳಿಂದ 1500 ಕ್ರೀಡಾಪಟುಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುವರು. ಒಟ್ಟು 14 ಕ್ರೀಡೆಗಳು ನಡೆಯಲಿವೆ. ಬ್ಯಾಡ್ಮಿಂಟನ್, ಬಾಲ್‌ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಚೆಸ್. ಕ್ರಿಕೆಟ್, ಫುಟ್‌ಬಾಲ್, ಹ್ಯಾಂಡ್‌ಬಾಲ್, ಹಾಕಿ, ಕಬಡ್ಡಿ, ಕೊಕ್ಕೊ, ಸಾಫ್ಟ್‌ಬಾಲ್, ಟೇಬಲ್ ಟೆನಿಸ್, ವಾಲಿಬಾಲ್, ಟೆನಿಸ್ ಕ್ರೀಡೆಗಳು ನಡೆಯಲಿವೆ.  ವಲಯಮಟ್ಟದಲ್ಲಿ ವಿಜೇತರಾದ ಕಾಲೇಜುಗಳ ವಿವಿಧ ತಂಡಗಳು ಮಾರ್ಚ್ 6ರಂದು ಸಂಜೆ 4.30ಕ್ಕೆ ಮಹಾವಿದ್ಯಾಲಯದಲ್ಲಿ ವರದಿ ಮಾಡಿಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.