ADVERTISEMENT

ಅದ್ದೂರಿ ಬಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 8:30 IST
Last Updated 10 ಜನವರಿ 2012, 8:30 IST

ಕೊಳ್ಳೇಗಾಲ: ಹೊಸಮಾಲಂಗಿ ಸುತ್ತಮುತ್ತಲ ಗ್ರಾಮಗಳ ಜನತೆಯ ಆರಾಧ್ಯ ದೈವ ಬಸವೇಶ್ವರಸ್ವಾಮಿ ಬಂಡಿ ಉತ್ಸವ ಭಾನುವಾರ ವಿಜೃಂ ಭಣೆಯಿಂದ ನೆರವೇರಿತು.

ಹೊಸಮಾಲಂಗಿಯ ಹೃದಯ ಭಾಗದಲ್ಲಿರುವ ಬಸವೇಶ್ವರಸ್ವಾಮಿ ಹಾಲರಿವೆ, ತೆಪ್ಪೋತ್ಸವ, ಪಲ್ಲಕ್ಕಿ ಮೆರವಣಿಗೆ ಹಾಗೂ ಬಂಡಿ ಉತ್ಸವ ಸಹಸ್ರಾರು ಭಕ್ತ ಸಮೂಹದೊಡನೆ ಸಂಭ್ರಮ, ಸಡಗರಗಳಿಂದ ನೆರ ವೇರಿತು. ಗ್ರಾಮದ ಸಮೀಪದ ತಾವರೆಕೆರೆಯಿಂದ ಹೊಸವಸ್ತ್ರ ಧರಿಸಿದ ಮಹಿಳೆಯರು ಮೆರವಣಿಗೆ ಮೂಲಕ ಆಲರಿವೆ ತಂದು ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಿದರು. ಸಂಜೆ ತಾವರೆ ಕೆರೆ ಬಳಿ ತೆಪ್ಪೋತ್ಸವ ನಡೆಯಿತು. ನಂತರ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಬಸ ವೇಶ್ವರಸ್ವಾಮಿ ಮೆರಣಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ದೇವರಿಗೆ ಹಣ್ಣು, ಹೂ ಪೂಜೆ ಸಲ್ಲಿಸಿದರು.

ಬಂಡಿಮಾಳ ಎಂದೇ ಕರೆಯ ಲಾಗುವ ಸ್ಥಳದಲ್ಲಿ ಗ್ರಾಮದ ಗೌಡ ರಾಚಪ್ಪ ಹಾಗೂ ಮಣಿಗಾರ್ ಉಮೇಶ್ ಸೇರಿದಂತೆ ಗ್ರಾಮದ ಮುಖಂಡರ ನೇತೃತ್ವದಲ್ಲಿ ಬಂಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಹಾಲರವಿ ಹಾಗೂ ಬಂಡಿ ಉತ್ಸವದ ಅಂಗವಾಗಿ ಗ್ರಾಮದ ಎಲ್ಲ ಬೀದಿ ಗಳನ್ನು ವಿದ್ಯುತ್ ದೀಪ, ತಳಿರು ತೋರಣ, ರಂಗವಲ್ಲಿಗಳಿಂದ ಸಿಂಗರಿಸ ಲಾಗಿತ್ತು. ಡಿವೈಎಸ್‌ಪಿ ಮಹ ದೇವಯ್ಯ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.