ಚಾಮರಾಜನಗರ: `ದೇಶದ ಅಭಿ ವೃದ್ಧಿಗೆ ಶಿಕ್ಷಣವೇ ಅಸ್ತ್ರ~ ಎಂದು ಚೂಡಾ ಅಧ್ಯಕ್ಷ ಎಸ್. ಬಾಲ ಸುಬ್ರಹ್ಮಣ್ಯ ಹೇಳಿದರು.
ನಗರದ ವಾಸವಿ ಮಹಲ್‌ನಲ್ಲಿ ಭಾನುವಾರ ಶ್ರೀರಾಮಶೇಷ ಸಂಸ್ಕೃತ ಪಾಠಶಾಲೆಯ 5ನೇ ವಾರ್ಷಿ ಕೋತ್ಸವದ ಅಂಗವಾಗಿ ಹಮ್ಮಿ ಕೊಂಡಿದ್ದ ಸೇವಾ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಂಪಾದಿಸಿದ ಹಣ, ಆಸ್ತಿ ಪರರ ಪಾಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಶ್ರಮಪಟ್ಟು ಕಲಿತ ವಿದ್ಯೆಯನ್ನು ಯಾರೊಬ್ಬರು ಕಳವು ಮಾಡಲು ಸಾಧ್ಯವಿಲ್ಲ ಎಂದ ಅವರು, ಕಳೆದ 5ವರ್ಷಗಳಿಂದಲೂ ಸಾವಿರಾರು ವಿದ್ಯಾರ್ಥಿಗಳಿಗೆ ರಾಮಶೇಷ ಸಂಸ್ಕೃತ ಪಾಠಶಾಲೆಯಿಂದ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಿಜೆಪಿ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಶೈಲೇಶ್ ಮಾತನಾಡಿ, ವಿದ್ಯಾದಾನ ಶ್ರೇಷ್ಠವಾದುದು. ವಿದ್ಯಾ ರ್ಥಿಗಳು ಸೇವಾಭಾವ ಬೆಳೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಶಾಲೆಯ ಪ್ರಾಚಾರ್ಯ ಪ್ರದೀಪ್‌ಕುಮಾರ್ ದೀಕ್ಷಿತ್ ಮಾತನಾಡಿ, `ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ದೊಂದಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪೋಷಕರು ನೀಡಿದ ಹಣವನ್ನು ವಿದ್ಯಾರ್ಥಿಗಳು ವರ್ಷಪೂರ್ತಿ ಸಂಗ್ರಹಿಸಿ ಸೇವಾ ಕಾರ್ಯಗಳಿಗೆ ಬಳಸುತ್ತಾರೆ~ ಎಂದು ಹೇಳಿದರು.
ಪಾಠಶಾಲೆಯ ಬಡವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಸೇವಾಭಾರತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ. ಶ್ರೀನಿವಾಸ ಗೌಡ, ಬಿಎಸ್‌ವಿ ಪ್ರತಿಷ್ಠಾನದ ಅಧ್ಯಕ್ಷ ವೆಂಕಟ ನಾಗಪ್ಪಶೆಟ್ಟಿ, ಏಕಲ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಮೋಹನ್, ಸುರೇಶ್ ಎನ್. ಋಗ್ವೇದಿ, ಎಲ್. ಸುರೇಶ್, ವೈ.ಆರ್. ಮಹೇಶ್ ಹಾಜರಿದ್ದರು. ಚಂದ್ರಕಲಾ ಮಾತಾಜಿ, ನಿರ್ಮಲಾ, ಜ್ಯೋತಿ, ಉಷಾ, ಪಾರ್ವತಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.