ADVERTISEMENT

ಆನೆ ದಾಳಿ: ಬೆಳೆ ಪರಿಹಾರ ಹೆಚ್ಚಳಕ್ಕೆ ಸಂಸದ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2012, 9:50 IST
Last Updated 22 ಮೇ 2012, 9:50 IST

ನವದೆಹಲಿ: ಚಾಮರಾಜನಗರ ಜಿಲ್ಲೆಯಲ್ಲಿ  ಮನುಷ್ಯ ಮತ್ತು ಆನೆಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇದರ ತಡೆಗೆ ಸಮಗ್ರ ಯೋಜನೆಯೊಂದನ್ನು ರೂಪಿಸಬೇಕು ಎಂದು ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ್ ಕೇಂದ್ರ ಸರ್ಕಾರವನ್ನು ಸೋಮವಾರ ಆಗ್ರಹಿಸಿದರು.

ಮನುಷ್ಯ ಮತ್ತು ಆನೆ ನಡುವಿನ ಸಂಘರ್ಷ ಕುರಿತು ಶೂನ್ಯ ವೇಳೆಯಲ್ಲಿ ಅವರು ಪ್ರಸ್ತಾಪ ಮಾಡಿದರು. ಆನೆಗಳ ಹಾವಳಿಯಿಂದ ನಾಶವಾಗುವ ಬೆಳೆಗೆ ನಿಗದಿ ಮಾಡಿರುವ ಪರಿಹಾರದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಆನೆ ಹಾವಳಿಯಿಂದ ಹಾಳಾಗುವ ಬೆಳೆಗಳಿಗೆ ಪರಿಹಾರದ ಪ್ರಮಾಣವನ್ನು 3 ವರ್ಷಗಳ ಹಿಂದೆ ನಿಗದಿ ಮಾಡಲಾಗಿದೆ. ಇದು ರೈತರಿಗೆ ಆಗುವ ನಷ್ಟವನ್ನು ತುಂಬಿಕೊಡುವುದಿಲ್ಲ. ಹೀಗಾಗಿ ಇದರ ಪ್ರಮಾಣವನ್ನು 3 ಪಟ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ತಮ್ಮ ಕೇತ್ರದಲ್ಲಿ ಇನ್ನೂ 1120 ಪ್ರಕರಣಗಳಲ್ಲಿ ಪರಿಹಾರ ವಿತರಣೆ ಆಗಬೇಕಿದೆ. ಹಣದ ಕೊರತೆಯಿಂದಾಗಿ ಪರಿಹಾರ ರೈತರಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಧ್ರುವನಾರಾಯಣ ಸರ್ಕಾರಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.