ADVERTISEMENT

‘ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 6:52 IST
Last Updated 9 ಏಪ್ರಿಲ್ 2018, 6:52 IST

ಯಳಂದೂರು:ಪಟ್ಟಣದ ಕಾರಾಪುರ ವಿರಕ್ತ ಮಠದ ಶ್ರೀನಿರಂಜನ ಕಾನ್ವೆಂಟ್‌ನಲ್ಲಿ ಚುನಾವಣಾ ಜಾಗೃತಿ ಜಾಥಕ್ಕೆ ಶನಿವಾರ ಬಸವರಾಜ ಸ್ವಾಮೀಜಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಭಾರತ ಪ್ರಜಾಪ್ರಭುತ್ವದ ವಿಶ್ವಸಾರ್ವಭೌಮ ರಾಷ್ಟ್ರವಾಗಿದೆ. ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿಟ್ಟನಲ್ಲಿ 18 ವರ್ಷ ದಾಟಿದ ಪ್ರತಿ ವ್ಯಕ್ತಿಗೂ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕು ಎಂದರು.

18 ವರ್ಷ ದಾಟಿದ ಯುವಕ, ಯುವತಿಯರು ತಪ್ಪದೆ ಮತಪಟ್ಟಿ ಯಲ್ಲಿ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಕೂಡ ಪ್ರಕ್ರಿಯೆ ಜಾರಿಯಲ್ಲಿದ್ದು ಅದರ ಅನುಕೂಲ ಪಡೆಯಿರಿ  ಎಂದು ಸಲಹೆ ನೀಡಿದರು.

ADVERTISEMENT

ನಂತರ ಅಂಬಳೆ ಗ್ರಾಮಕ್ಕೆ ತೆರಳಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತದಾನದ ಮಹತ್ವದ ಬಗ್ಗೆ ಘೋಷಣೆಗಳನ್ನು ಕೂಗಿ, ಮನೆ ಮನೆಗಳಿಗೆ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಬಿಆರ್‌ಪಿ ಮಹೇಶ್, ವೈ.ಎಂ. ಮಂಜುನಾಥಸ್ವಾಮಿ, ಶಾಲೆಯ ಮುಖ್ಯಶಿಕ್ಷಕಿ ಮಮತಾ ಸಹ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.