ADVERTISEMENT

ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಸಂತೋಷ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 9:06 IST
Last Updated 15 ಏಪ್ರಿಲ್ 2014, 9:06 IST

ಕೊಳ್ಳೇಗಾಲ: ‘ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಯುವಪೀಳಿಗೆ ಕ್ರೀಡೆಗೆ ಹೆಚ್ಚು ಒತ್ತುನೀಡಬೇಕು’ ಎಂದು ಪಟ್ಟಣ ಠಾಣೆ ಎಸ್‌ಐ ಸಂತೋಷ ತಿಳಿಸಿದರು.

ಇಲ್ಲಿನ ಬಸವಲಿಂಗಪ್ಪ ಕಾಲೇಜು ಆವರಣದಲ್ಲಿ ಭಾನುವಾರ ಎಚ್‌.ಕೆ. ಸ್ಪೋರ್ಟ್ಸ್‌ ಅಕಾಡೆಮಿ ಆ್ಯಂಡ್‌ ಚಾರಿಟಬಲ್‌ ಟ್ರಸ್ಟ್ ಹಾಗೂ ರೋಟರಿ ಮಿಡ್‌ಟೌನ್‌ ಸಂಯುಕ್ತಾಶ್ರಯದಲ್ಲಿ ಏ. 11ರಿಂದ ಮೇ 25ರವರೆಗೆ ಏರ್ಪಡಿಸಿರುವ ‘ಕ್ರಿಕೆಟ್‌ ಸಮ್ಮರ್‌ ಕ್ಯಾಂಪ್‌’ ಉದ್ಘಾಟನಾ ಕಾರ್ಯಕ್ರಮದಲ್ಲಿ ಈಚೆಗೆ ಅವರು ಮಾತನಾಡಿದರು.

ಕ್ರೀಡಾಪಟುಗಳು ಸೋಲು– ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ವ್ಯರ್ಥವಾಗಿ ಕಾಲಹರಣ ಮಾಡದೆ ಉತ್ತಮ ತರಬೇತಿ ಹೊಂದಲು ಇಂತಹ ಶಿಬಿರಗಳು ಸಹಾಯಕಾರಿ ಎಂದರು.

ರೋಟರಿ ಮಿಡ್‌ಟೌನ್‌ ಅಧ್ಯಕ್ಷ ನಟರಾಜು ಕ್ಯಾಂಪ್‌ ಉದ್ಘಾಟನೆ ನೆರವೇರಿಸಿದರು. ಪ್ರೇಮಲತಾ ಕೃಷ್ಣಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರಮೇಶ್‌, ಜೆ. ಹರ್ಷ, ನಗರಸಭಾ ಮಾಜಿ ಸದಸ್ಯ ಚಂದ್ರಶೇಖರ್‌, ಪ್ರವೀಣ್‌ಕುಮಾರ್‌, ಉಮಾಶಂಕರ್‌, ನಟರಾಜು, ಮುಖ್ಯ ಶಿಕ್ಷಕ ಶಾಂತರಾಜು,ಲೋಕೇಶ್‌ ಇದ್ದರು.

ಉಪನ್ಯಾಸ ಕಾರ್ಯಕ್ರಮ ಇಂದು
ಚಾಮರಾಜನಗರ: ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಿಂದ ಏ. 15ರಂದು ಮಧ್ಯಾಹ್ನ 2.30ಗಂಟೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಜನ್ಮ ದಿನಾಚರಣೆ, ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ. ಪುಷ್ಪಾವತಿ ಅಧ್ಯಕ್ಷತೆವಹಿಸುವರು. ಉಪನ್ಯಾಸಕ ನಾಗೇಶ್‌ ಸೋಸ್ಲೆ ಉಪನ್ಯಾಸ ನೀಡಲಿದ್ದಾರೆ. ಉಪ ಪ್ರಾಂಶುಪಾಲ ಪ್ರೊ.ಎ.ಜಿ. ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT