ಚಾಮರಾಜನಗರ: ಗುಂಡ್ಲುಪೇಟೆ ಹಾಗೂ ಚಾ.ನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರ ‘ಕೈ’ ಪಾಲಾಗಿದೆ.
ತಾಲ್ಲೂಕು ಕೇಂದ್ರಗಳಲ್ಲಿ ಸೋಮವಾರ ಮತ ಎಣಿಕೆ ನಡೆಯಿತು. ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಹಣೆಬರಹ ಬಯಲಾಯಿತು. ಚಾ.ನಗರ ಎಪಿಎಂಸಿಯ 12 ನಿರ್ದೇಶಕರ ಸ್ಥಾನದಲ್ಲಿ ಕಾಂಗ್ರೆಸ್- 9 ಹಾಗೂ ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಗುಂಡ್ಲುಪೇಟೆ ಎಪಿಎಂಸಿಯ 12 ಸ್ಥಾನದಲ್ಲಿ ಕಾಂಗ್ರೆಸ್ 10ರಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ ಎರಡು ಸ್ಥಾನ ಮಾತ್ರ ಪಡೆದಿದೆ.
ಚಾ.ನಗರ ಎಪಿಎಂಸಿ ವ್ಯಾಪ್ತಿಗೆ ಯಳಂದೂರು ತಾಲ್ಲೂಕು ಸಹ ಸೇರಿದೆ. ಒಟ್ಟು 82,093 ಮತದಾರರಿದ್ದಾರೆ. ಆದರೆ, ಮತ ಚಲಾಯಿ ಸಿದವರ ಸಂಖ್ಯೆ 22,034. ಶೇ. 26.84ರಷ್ಟು ಮತದಾನವಾಗಿತ್ತು. ಒಟ್ಟು 252 ಮತ ತಿರಸ್ಕೃತಗೊಂಡಿವೆ.
ಗೆಲುವಿನ ವಿವರ: ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ. ರತ್ನಮ್ಮ 53 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ರತ್ನಮ್ಮ 834 ಮತ ಪಡೆದಿದ್ದಾರೆ. ಪ್ರತಿಸ್ಪರ್ಧಿ ಶೋಭಾಗೆ 781 ಮತ ಬಿದ್ದಿವೆ.
ಬದನಗುಪ್ಪೆ ಕ್ಷೇತ್ರದಿಂದ ಬಿಜೆಪಿಯ ವೀರತಪ್ಪ 598 ಮತಗಳ ಅಂತರದಿಂದ ಜಯದ ನಗೆ ಬೀರಿದ್ದು, ಒಟ್ಟು 1,105 ಮತ ಪಡೆದಿದ್ದಾರೆ. ಪ್ರತಿಸ್ಪರ್ಧಿಗಳಾದ ಡಿ.ಕೆ. ದೊರೆಸ್ವಾಮಿ- 507 ಹಾಗೂ ವೀರಭದ್ರಸ್ವಾಮಿ- 73 ಮತ ಪಡೆದಿದ್ದಾರೆ.
ಹರವೆ ಕ್ಷೇತ್ರದಿಂದ ಕಾಂಗ್ರೆಸ್‌ನ ಎಂ. ಗಿರೀಶ್ 63 ಮತಗಳ ಅಂತರದಿಂದ ಆಯ್ಕೆಯಾಗಿದ್ದು, 1,097 ಮತ ಪಡೆದಿದ್ದಾರೆ. ಎಚ್.ಆರ್. ನಾಗರಾಜಮೂರ್ತಿ- 332 ಹಾಗೂ ಎಂ.ಎಲ್. ಲಿಂಗಪ್ಪಗೆ 1,034 ಮತ ಬಿದ್ದಿವೆ.ಉಡಿಗಾಲ ಕ್ಷೇತ್ರ ‘ಕೈ’ ಪಾಲಾಗಿದ್ದು, ಎನ್.ಎಂ. ಶಿವಸ್ವಾಮಿ 533 ಮತಗಳಿಂದ ಜಯಗಳಿಸಿದ್ದಾರೆ.ಶಿವಸ್ವಾಮಿ 1,733 ಮತ ಪಡೆದಿದ್ದು, ಮಾದಪ್ಪಗೆ 1,199 ಮತ ಬಿದ್ದಿವೆ.
ಅಮಚವಾಡಿ ಕ್ಷೇತ್ರದಿಂದ ಬಿಜೆಪಿಯ ಎ.ಎಸ್. ತೀರ್ಥೇಶ್ 289 ಮತಗಳ ಅಂತರ ದಲ್ಲಿ ಜಯಗಳಿದ್ದು, ಒಟ್ಟು 1,096 ಮತ ಪಡೆದಿದ್ದಾರೆ. ವಿ. ಪುಟ್ಟಸ್ವಾಮಿ- 190, ರವಿಕುಮಾರ್- 807, ಶಿವಕುಮಾರ್- 73 ಮತ ಪಡೆದಿದ್ದಾರೆ.
ಹರದನಹಳ್ಳಿ ಕ್ಷೇತ್ರ ಕಾಂಗ್ರೆಸ್‌ಗೆ ಒಲಿದಿದ್ದು, ಎಸ್. ಪುರುಷೋತ್ತಮ 427 ಮತಗಳ ಅಂತರ ದಿಂದ ವಿಜೇತರಾಗಿದ್ದಾರೆ. ಅವರು 1,135 ಮತ ಪಡೆದಿದ್ದು, ಪ್ರತಿಸ್ಪರ್ಧಿ ಡಿ.ಎಸ್. ಚೆನ್ನಂಜಯ್ಯ 708 ಮತಗಳಿಸಿದ್ದಾರೆ.
ನಾಗವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಿವಕುಮಾರ್ 808 ಮತ ಪಡೆದಿದ್ದು, 41 ಮತಗಳಿಂದ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕೆ.ಎಂ. ನಾಗಸುಂದರ ಅವರಿಗೆ 767 ಮತ ಬಿದ್ದಿವೆ. ಹೊಂಗನೂರು ಕ್ಷೇತ್ರ ಬಿಜೆಪಿ ಪಾಲಾಗಿದ್ದು, ವೈ.ಎನ್. ನಂಜಶೆಟ್ಟಿ 37 ಮತಗಳಿಂದ ಜಯ ಗಳಿಸಿದ್ದಾರೆ. ಅವರಿಗೆ 959 ಮತ ಬಿದ್ದಿದ್ದು, ಪ್ರತಿಸ್ಪರ್ಧಿ ನಂಜುಂಡೇಗೌಡ 922 ಮತ ಪಡೆದಿದ್ದಾರೆ.
ಉಮ್ಮತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿ. ರಾಜಶೇಖರ್ 651 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಒಟ್ಟು 1,202 ಮತ ಪಡೆದಿದ್ದಾರೆ. ಮಹದೇವಪ್ರಸಾದ್- 150, ಮಹೇಶ್ 551 ಮತ ಪಡೆದಿದ್ದಾರೆ.
ಯಳಂದೂರು ಕ್ಷೇತ್ರದಿಂದ ಕಾಂಗ್ರೆಸ್‌ನ ವೈ.ಎಲ್. ಶಿವಸ್ವಾಮಿ ಚುನಾಯಿತರಾಗಿದ್ದಾರೆ. ಒಟ್ಟು 989 ಮತ ಪಡೆದಿದ್ದು, 468 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಉಳಿದಂತೆ ವೈ.ಎಂ. ನೀಲಕಂಠಸ್ವಾಮಿ- 521, ಬಿ. ಮಹದೇವನಾಯ್ಕ- 36 ಮತ ಪಡೆದಿದ್ದಾರೆ.
ಅಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ಎಂ. ಮಾದಪ್ಪ 695 ಮತಗಳ ಅಂತರದಿಂದ ಜಯ ಗಳಿಸಿದ್ದು, ಒಟ್ಟು 1,358 ಮತ ಪಡೆದಿದ್ದಾರೆ. ಸಿ.ಎಂ. ಮಹದೇವಸ್ವಾಮಿಗೆ 663 ಮತ ಬಿದ್ದಿವೆ.
ವರ್ತಕರ ಕ್ಷೇತ್ರದಿಂದ ಕಾಂಗ್ರೆಸ್‌ನ ಎಲ್. ಸುರೇಶ್ 4 ಮತದ ಅಂತರದಿಂದ ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 173 ಮತದಾರರಿದ್ದು, 154 ಮಂದಿ ಮತ ಚಲಾಯಿಸಿದ್ದರು. ಸುರೇಶ್‌ಗೆ 71 ಮತ ಬಿದ್ದಿವೆ. ಸೈಯದ್ ಆಲ್ತಾಫ್- 16 ಹಾಗೂ ಹರೀಶ್- 67 ಮತ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.