ADVERTISEMENT

ಗುಂಡ್ಲುಪೇಟೆ: ಮಳೆಗೆ ಬಾಳೆ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 10:57 IST
Last Updated 4 ಏಪ್ರಿಲ್ 2018, 10:57 IST

ಗುಂಡ್ಲುಪೇಟೆ: ಸೋಮವಾರ ರಾತ್ರಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾದ್ದರಿಂದ ಹಲವು ಗ್ರಾಮಗಳಲ್ಲಿ ಹಾನಿಯುಂಟಾಗಿದೆ.ತಾಲ್ಲೂಕಿನ ಮಗುವಿನಹಳ್ಳಿ ಗ್ರಾಮದಲ್ಲಿ ಶಾಲೆಯ ಅಡುಗೆ ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿ ತೊಂದರೆಯಾಗಿದೆ. ಮಂಗಳವಾರ ಬೆಳಿಗ್ಗೆ ಅಡುಗೆ ಮಾಡುವ ಸಿಬ್ಬಂದಿ ನೀರನ್ನೆಲ್ಲ ಹೊರ ಚೆಲ್ಲಿದರು.ಬಲಚಲವಾಡಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನಾಶವಾಗಿದೆ. ಗ್ರಾಮದ ಶಂಕರಪ್ಪ ಅವರ ಜಮೀನಿನಲ್ಲಿ ನೂರಕ್ಕು ಹೆಚ್ಚು ಬಾಳೆ ನೆಲಕ್ಕುರುಳಿದೆ.‘ಸುಮಾರು ಒಂದು ₹1 ಲಕ್ಷ ನಷ್ಟವಾಗಿದೆ, ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಪಟ್ಟಣದ ಮಾಡ್ರಹಳ್ಳಿ ವೃತ್ತದಲ್ಲಿ ಮಳೆಯಿಂದ ನೀರು ನಿಂತಿದ್ದರಿಂದ ಮಂಗಳವಾರ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಯಿತು. 

ಪರಿಹಾರಕ್ಕೆ ಒತ್ತಾಯ: ಸೋಮವಾರ ಸುರಿದ ಮಳೆಗೆ ಡೊಂಗ್ರಿ ಗರಾಸಿಯ ಜನಾಂಗದ ಗುಡಿಸಲಿನ ಮೇಲ್ಚಾವಣಿ ಮಳೆಗೆ ಹಾಳಾಗಿವೆ.ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.ಸುಮಾರು 20 ಮಂದಿ ನಿವಾಸಿಗಳು ಕಚೇರಿಯ ಮುಂದೆ ಧರಣಿ ನಡೆಸಿ, ಹಾಳಾಗಿರುವ ಪ್ಲಾಸಿಕ್ ಶೀಟ್ ಕೊಡಿಸಬೇಕು ಎಂದು ಆಗ್ರಹಿಸಿದರು.ತಹಶೀಲ್ದಾರ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT