ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಚನ್ನಮಲ್ಲಿಪುರ, ಮದ್ದಯ್ಯನಹುಂಡಿ, ಬೇರಂಬಾಡಿ ಸುತ್ತಮುತ್ತಲು ಹುಲಿ ಸೆರೆ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ಆದರೆ ಹುಲಿ ಗುರುತು ಪತ್ತೆಯಾಗಿಲ್ಲ.
ಹುಲಿ ಸೆರೆಗೆ ಮೊದಲ ದಿನ ಸಾಕಾನೆ ರೋಹಿತ್ ಬಳಕೆ ಮಾಡಿಕೊಂಡು ಕೂಂಬಿಂಗ್ ನಡೆಸಲಾಗಿತ್ತು. ಆದರೆ, ಹುಲಿ ಸುಳಿವು ಮಾತ್ರ ಸಿಗಲಿಲ್ಲ. 2ನೇ ದಿನ ಶನಿವಾರವೂ ಡಿಆರ್‌ಎಫ್‍ಒ ರವಿ ನೇತೃತ್ವದ ತಂಡ 36 ಅರಣ್ಯ ಸಿಬ್ಬಂದಿ ಜೊತೆಗೆ ಕಾರ್ಯಾಚರಣೆ ಆರಂಭಿಸಿದ್ದು, ಚನ್ನಮಲ್ಲಿಪುರ, ಮದ್ದಯ್ಯನಹುಂಡಿ, ಬೇರಂಬಾಡಿ ವ್ಯಾಪ್ತಿಯಲ್ಲಿ ಹುಡುಕಾಡಿದರೂ ಹುಲಿಯ ಕಾಣಸಿಗಲಿಲ್ಲ.
ಶನಿವಾರ ಎಲ್ಲೂ ಕೂಡ ಹುಲಿಯ ಹೊಸ ಹೆಜ್ಜೆ ಗುರುತು ಸಿಕ್ಕಿಲ್ಲ. ಆದರೂ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ಕೂಂಬಿಂಗ್ ನಡೆಸಿದ್ದೇವೆ. ಜೊತೆಗೆ 8 ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ಡಿಆರ್‌ಎಫ್‍ಒ ರವಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.