ADVERTISEMENT

ಪ್ರಸನ್ನ ಮೀನಾಕ್ಷಿ ದೇವಾಲಯ ಪೂರ್ವ ಬಾಗಿಲು ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 9:08 IST
Last Updated 27 ನವೆಂಬರ್ 2012, 9:08 IST

ಕೊಳ್ಳೇಗಾಲ: ಶಿವನಸಮುದ್ರದ ಪ್ರಸನ್ನ ಮೀನಾಕ್ಷಿ ಸಮೇತ ಸೋಮೇಶ್ವರ  ದೇವಾಲಯ ಪೂರ್ವ ಮಹಾದ್ವಾರದ ನೂತನ ಬಾಗಿಲು ಸಮರ್ಪಣಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ಪ್ರಸನ್ನ ಮೀನಾಕ್ಷಿ ದೇವಾಲಯ ಮುಂಬಾಗದ ಮಂಟಪದಲ್ಲಿ ವಿಶೇಷ ಪೂಜೆ ಮತ್ತು ಹೋಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ದೇವಾಲಯವನ್ನು ಹೂವು, ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿ ಸಲಾಗಿತ್ತು.

ಮಳವಳ್ಳಿ, ಮಂಡ್ಯ, ಬೆಳಕವಾಡಿ ಸೇರಿದಂತೆ ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಸಾವಿರಾರು    ಭಕ್ತರು ಆಗಮಿಸಿದ್ದರು.
ಬಿಳಿಗಿರಿರಂಗನ ಬೆಟ್ಟದ ವಾದ್ಯಗೋಷ್ಠಿಯ ಮೂಲಕ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಪೂರ್ವ ಮಹಾದ್ವಾರದ ನೂತನ ಬಾಗಿಲ ಮೂಲಕ ಹಸುವಿನ ಜೊತೆಗೂಡಿ ಉತ್ಸವ ಮೂರ್ತಿ ಪ್ರವೇಶಿಸುವ ಮೂಲಕ ಪೂರ್ವ ಬಾಗಿಲ ಸೇವೆಯನ್ನು ಸಾರ್ವಜನಿಕರಿಗೆ ಸಮರ್ಪಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಯುವ ಸೌರಭ ಭಕ್ತಿಗೀತೆಗಳ ಗಾಯನ ನಡೆಯಿತು. ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ದೇವಾಲಯದ ಜೀರ್ಣೋದ್ಧಾರಕ್ಕೆ ಕಾರಣಕರ್ತರಾದ ಉಪವಿಭಾಗಾಧಿಕಾರಿ ಎ.ಬಿ. ಬಸವರಾಜು ಹಾಗೂ ಇತರರನ್ನು ನರೇಂದ್ರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.