ADVERTISEMENT

ಬಸ್ ನಿಲ್ದಾಣ ನಿರ್ಮಾಣಕ್ಕೆ ಗುದ್ದಲಿಪೂಜೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 8:55 IST
Last Updated 17 ಜನವರಿ 2012, 8:55 IST

ಚಾಮರಾಜನಗರ: `ಜಿಲ್ಲಾ ಕೇಂದ್ರದ ನಾಲ್ಕು ಭಾಗದಲ್ಲಿ ಪ್ರಯಾಣಿಕರ ತಂಗು ದಾಣ ನಿರ್ಮಾಣಕ್ಕೆ ಕ್ರಮಕೈಗೊಳ್ಳ ಲಾಗಿದೆ~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಸೋಮವಾರ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಂತೇಮರಹಳ್ಳಿ ವತ್ತ, ಆರ್‌ಟಿಒ ಕಚೇರಿ, ಲಾರಿ ನಿಲ್ದಾಣ ಮತ್ತು ಆಸ್ಪತ್ರೆ ಮುಂಭಾಗ ತಲಾ 2 ಲಕ್ಷ ರೂ ವೆಚ್ಚದಡಿ  ತಂಗುದಾಣ ನಿರ್ಮಿಸಲಾಗುತ್ತಿದೆ. ಈ ಸ್ಥಳದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ತಂಗುದಾಣ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಮಳೆ ಮತ್ತು ಬಿಸಿಲಿನಿಂದ ಸಂಕಷ್ಟ ಅನುಭವಿ ಸುತ್ತಿದ್ದರು.

ಹೀಗಾಗಿ, ನಾಗರಿಕರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು. ಸಂಸದ ಆರ್. ಧ್ರುವನಾ ರಾಯಣ, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ತಾ.ಪಂ. ಉಪಾಧ್ಯಕ್ಷ ಪಿ. ಮಹಾಲಿಂಗ ಸ್ವಾಮಿ, ಸದಸ್ಯ ಚಿಕ್ಕಮಹದೇವು, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಬಿ.ಪಿ. ಪುಟ್ಟಬುದ್ಧಿ, ಮಾಜಿ ಉಪಾಧ್ಯಕ್ಷ ಶಿವಕುಮಾರ್, ಬಿ.ಪಿ. ನಟರಾಜಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.