ಕೊಳ್ಳೇಗಾಲ: ಪಟ್ಟಣದ ಐತಿಹಾಸಿಕ ಮೀನಾಕ್ಷಿ ಮರಳೇಶ್ವರಸ್ವಾಮಿ ದೇವಾಲಯದಲ್ಲಿ ಈಚೆಗೆ ಧ್ವಜಸ್ತಂಭ ಪುನರಾವರ್ತನ ಜೀರ್ಣೋದ್ಧಾರ ಮಹಾಕುಂಭಾಭಿಷೇಕ ವಿಜೃಂಭಣೆಯಿಂದ ನೆರವೇರಿತು.
ಮಹಾಕುಂಭಾಭಿಷೇಕದ ಅಂಗವಾಗಿ ರಕ್ಷೋಘ್ನ ಹೋಮ, ಪರಿಯಗ್ನಿಕರಣ, ಮೃತ್ಸಂಗ್ರಹಣ, ಅಂಕುರಾರ್ಪಣ, ರಕ್ಷಾಬಂಧನ, ಕುಂಭಾಲಂಕಾರ, ಕುಂಭಸ್ಥಾಪನಾ, ಕಲಶ ಅರ್ಚನೆ, ಯಾಗಾರಂಭ, ತತ್ವಹೋಮಾದಿಗಳು, ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಬಳಿಕ ಮೀನಾಕ್ಷಿ ಸೈಕತೇಶ್ವರಸ್ವಾಮಿ ಮತ್ತು ಪರಿವಾರ ದೇವರುಗಳ ನೂತನ ಧ್ವಜಸ್ತಂಭಕ್ಕೆ ಮಹಾಕುಂಭಾಭಿಷೇಕ ತತ್ವನ್ಯಾಸ, ಜೀವನ್ಯಾಸ, ದೀಪ, ದರ್ಪಣ, ಪೂರ್ಣ ಕುಂಭ ದರ್ಶನಾ, ಕುಮಾರಿ ಪೂಜಾ, ಸುಹಾಸಿನಿ ಪೂಜಾ, ದಂಪತಿ ಪೂಜೆ ವಿಜೃಂಭಣೆಯಿಂದ ನಡೆಯಿತು. ತಹಶೀಲ್ದಾರ್ ಸುರೇಶ್‌ಕುಮಾರ್ ನೇತೃತ್ವದಲ್ಲಿ ಮರುಳೇಶ್ವರ ದೇವಾಲಯದ ಕೆ. ಶ್ರೀಕಂಠದೀಕ್ಷಿತ್, ಎನ್.ನಾಗೇಂದ್ರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ದೇವೇಂದ್ರಗುಪ್ತ, ಎ.ಎನ್.ನಾಗರಾಜು, ಎಂ.ಸೀತಾರಾಮು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.