ADVERTISEMENT

ಮಲ್ಲಯ್ಯನಪುರ ರಸ್ತೆ ತುಂಬ ಜಲ್ಲಿಕಲ್ಲು!

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 8:40 IST
Last Updated 15 ಜನವರಿ 2012, 8:40 IST

ಗುಂಡ್ಲುಪೇಟೆ : ರಸ್ತೆ ತುಂಬ ಜಲ್ಲಿ ಕಲ್ಲು, ಸಮರ್ಪಕವಾಗಿ ಡಾಂಬರೀಕರಣ ವಾಗಿಲ್ಲ, ವಾಹನಗಳ ಓಡಾಟಕ್ಕೆ ತುಂಬ ತೊಂದರೆ..

ಇದು ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮಕ್ಕೆ ಹೋಗ ಬೇಕಾದರೆ ಸಿಗುವ ರಸ್ತೆಯ ದುಃಸ್ಥಿತಿ. ಅನೇಕ ವರ್ಷಗಳಿಂದ ಈ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಗ್ರಾಮವು ಕೇರಳ ರಾಜ್ಯಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಬಳಿ ಇದ್ದರೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ  ರಸ್ತೆ ತೀರಾ ಹದಗೆಟ್ಟಿದೆ. ರಾತ್ರಿ ವೇಳೆ ಸಂಚರಿಸುವುದು ಬಹಳ ಪ್ರಯಾಸ.

` ಈ ರಸ್ತೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ, ಆದರೂ ಇದರ ಬಗ್ಗೆ ಇಲಾಖೆ ನಿರ್ಲಕ್ಷ್ಯ ಮಾಡಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಹ ಈ ರಸ್ತೆಯ ಮೂಲಕವೇ ಓಡಾಡುತ್ತಾರೆ ಹೊರತು ರಸ್ತೆ ದುರಸ್ತಿಗೆ ಮುಂದಾಗಿಲ್ಲ~ ಎಂಬುದು ಗ್ರಾಮದ ಮಹಾದೇವಶೆಟ್ಟಿ ಅವರ ಆರೋಪ.

ಕೂಡಲೇ ರಸ್ತೆಗೆ ಡಾಂಬರು ಹಾಕುವ ಮೂಲಕ ರಸ್ತೆ ದುರಸ್ತಿ ಪಡಿಸಿದರೆ ಗ್ರಾಮಸ್ಥರು ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ.  ಗ್ರಾಮಕ್ಕೆ ಯಾವುದೇ ಬಸ್‌ಗಳು ಬರುತ್ತಿಲ್ಲ. ಸುಮಾರು ಒಂದು ಕಿ.ಮೀ. ದೂರ ಇರುವ ಮುಖ್ಯ ರಸ್ತೆಗೆ ಬಂದು ಇತರೆ ವಾಹನಗಳಲ್ಲಿ ಪ್ರಯಾಣಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯನ್ನು ದುರಸ್ತಿ ಪಡಿಸಿ ಬಸ್‌ಗಳು ಗ್ರಾಮದ ಒಳಕ್ಕೆ ಬರಬೇಕು. ಇಂದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ಬೇಡಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.