ADVERTISEMENT

ಯವಕರು ದುಶ್ಚಟಕ್ಕೆ ಬಲಿಯಾಗದಿರಲಿ: ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2013, 7:20 IST
Last Updated 15 ಜನವರಿ 2013, 7:20 IST
ಪಟ್ಟಣದ ಎಂಜಿಎಸ್‌ವಿ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಯೂತ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಅಂಗವಿಕಲರ ಪ್ರತಿಭೆ ಅನಾವರಣ ವಿಶೇಷ ಕಾರ್ಯಕ್ರಮವನ್ನು ರಾಜ್ಯ ರೇಷ್ಮೆ ಕೈಗಾರಿಕೆ ನಿಗಮ ಅಧ್ಯಕ್ಷ ನೂರೊಂದುಶೆಟ್ಟಿ ಉದ್ಘಾಟಿಸಿದರು. ಮಾಜಿ ಶಾಸಕ ಎಸ್.ಬಾಲರಾಜ್, ಡಾ. ದತ್ತೇಶ್‌ಕುಮಾರ್, ಎನ್.ಮಹೇಶ್ ಇದ್ದಾರೆ.
ಪಟ್ಟಣದ ಎಂಜಿಎಸ್‌ವಿ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಯೂತ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಅಂಗವಿಕಲರ ಪ್ರತಿಭೆ ಅನಾವರಣ ವಿಶೇಷ ಕಾರ್ಯಕ್ರಮವನ್ನು ರಾಜ್ಯ ರೇಷ್ಮೆ ಕೈಗಾರಿಕೆ ನಿಗಮ ಅಧ್ಯಕ್ಷ ನೂರೊಂದುಶೆಟ್ಟಿ ಉದ್ಘಾಟಿಸಿದರು. ಮಾಜಿ ಶಾಸಕ ಎಸ್.ಬಾಲರಾಜ್, ಡಾ. ದತ್ತೇಶ್‌ಕುಮಾರ್, ಎನ್.ಮಹೇಶ್ ಇದ್ದಾರೆ.   

ಕೊಳ್ಳೇಗಾಲ: `ಮಹಾನ್ ಚೇತನಗಳು ಪ್ರತಿಪಾದಿಸಿದ ವಿಚಾರ ಅರಿತು ಆಚ ರಣೆಯಲ್ಲಿ ತಂದಾಗ ಮಾತ್ರ ಜಯಂತಿ ಆಚರಣೆಗೆ ಮಹತ್ವ ಬರುತ್ತದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ನೂರೊಂದುಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಂಜಿಎಸ್‌ವಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗ ಣದಲ್ಲಿ ಶನಿವಾರ ಸ್ವಾಮಿ ವಿವೇಕಾ ನಂದ ಯೂತ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಅಂಗವಿಕಲರ ಪ್ರತಿಭೆ ಅನಾವರಣ ವಿಶೇಷ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೊ. ಬಸವರಾಜಪ್ಪ ಮಾತನಾಡಿ, ಯುವಪೀಳಿಗೆ ದುಶ್ಚಟಗಳ ದಾಸರಾಗದೇ ದೇಶಕಟ್ಟುವ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ವಿವೇಕಾನಂದರ ಜನ್ಮದಿನಾಚರಣೆಯಂದೇ ವಿವೇಕಾ ನಂದ ಯೂತ್ ಅಸೋಷಿ ಯೇಷನ್ ಅಸ್ತಿತ್ವಕ್ಕೆ ಬಂದಿದ್ದು, ಯುವಕರು ವಿವೇಕಾನಂದರ ತತ್ವಾದರ್ಶಗಳ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ದೇಶದ ಆಸ್ತಿಯಾಗಬೇಕು ಎಂದು ಸಲಹೆ ನೀಡಿದರು.

ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ದತ್ತೇಶ್‌ಕುಮಾರ್, ಮಾಜಿ ಶಾಸಕ ಎಸ್. ಬಾಲರಾಜ್, ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಚಾಲಕ ಎನ್. ಮಹೇಶ್, ತಹಶೀಲ್ದಾರ್ ಕೆ.ಎಂ. ಸುರೇಶ್‌ಕುಮಾರ್, ಕಬ್ಬುಬೆಳೆಗಾರರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಬೂದಿತಿಟ್ಟುಗುರುಸ್ವಾಮಿ, ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ಉಪಾಧ್ಯಕ್ಷ ವಿ.ಕುಮಾರ್, ಸ್ವಾಮಿ ವಿವೇಕಾನಂದ ಯೂತ್ ಅಸೊಸಿ ಯೇಷನ್ ಗೌರವ ಅಧ್ಯಕ್ಷ ಚೇತನ್‌ಕುಮಾರ್, ಅಧ್ಯಕ್ಷ ಮಹೇಶ್, ನಗರ ಸಭಾ ಸದಸ್ಯ ಕೃಷ್ಣಯ್ಯ, ಬಸ್ತೀಪುರ ಶಾಂತರಾಜು, ಎಸ್.ಮೂರ್ತಿ, ಚಂದ್ರಶೇಖರ್,  ವಿನಯ್, ಮಹೇಶ್, ಆನಂದ್, ಶಿವಕುಮಾರ್, ಲಿಂಗ ರಾಜು, ಮುಖಂಡರಾದ ಮಾಂಬಳ್ಳಿ ಅರುಣ್‌ಕುಮಾರ್, ಜೆ.ಮೂರ್ತಿ, ಜಿ.ಮಹದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.