ADVERTISEMENT

ವಾಟಾಳ್ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 7:05 IST
Last Updated 4 ಏಪ್ರಿಲ್ 2013, 7:05 IST

ಚಾಮರಾಜನಗರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮತಯಾಚನೆ ನಡೆಸಿದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡುವಿನಕಟ್ಟೆ, ಶಿವಪುರ, ಯಡಪುರ, ಉತ್ತುವಳ್ಳಿ, ಮುತ್ತಿಗೆ, ಬೆಂಡರವಾಡಿ, ಬಿ. ಮಲ್ಲಯ್ಯನಪುರ, ಮೇಗಲಹುಂಡಿ, ಹೆಗ್ಗೋಠಾರ, ಕಾಳನಹುಂಡಿ, ನಂಜೇದೇವನಪುರ, ತಮ್ಮಡಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ನಂತರ ಮಾತನಾಡಿದ ಅವರು, `ತಾವು ಕ್ಷೇತ್ರದ ಶಾಸಕನಾಗಿದ್ದ ವೇಳೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೆ. ಆ ನಂತರ ಕ್ಷೇತ್ರದ ವ್ಯಾಪ್ತಿ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ' ಎಂದರು.

ಚಾಮರಾಜನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಶ್ರಮಿಸಿ ದ್ದೇನೆ. ಜಿಲ್ಲಾ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕಾವೇರಿ ನದಿ ಯಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಒತ್ತು ನೀಡಿದ್ದೇನೆ. 2ನೇ ಹಂತದ ಕಾವೇರಿ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೂ ಹೋರಾಟ ಮಾಡಲಾಗುವುದು. ಈ ನಿಟ್ಟಿನಲ್ಲಿ ಮತದಾರರು ತಮ್ಮ ಪರ ಒಲವು ವ್ಯಕ್ತಪಡಿಸಬೇಕು ಎಂದು ಕೋರಿದರು.


ತಾವು ಶಾಸಕರಾಗಿದ್ದ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೂ ವಿವಿಧ ಸವಲತ್ತು ಕಲ್ಪಿಸಿದ್ದೇನೆ. ಅರ್ಹರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಒದಗಿಸಿದ್ದೇನೆ ಎಂದರು.

ಮುಖಂಡರಾದ ದಳಪತಿ ವೀರತ್ತಪ್ಪ, ಬೇಡರಪುರ ಬಸವಣ್ಣ, ಚಿಕ್ಕಬಸವಣ್ಣ,ಕೆ.ಕೆ. ಹುಂಡಿ ಕುಮಾರ್, ಬೀರೇಗೌಡ, ನಾಗರಾಜಮೂರ್ತಿ, ಚನ್ನಮಲ್ಲಪ್ಪ, ಕೊತ್ತಲವಾಡಿ ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT